ಮಂಗಳೂರು: ಯುವಕನೊಬ್ಬ ತನ್ನ ಪ್ರೇಯಸಿ ತನ್ನೊಂದಿಗೆ ಔಟಿಂಗ್ ಬಂದಿಲ್ಲ ಎಂದು ಕೋಪಗೊಂಡು ಪಿಜಿಗೆ ಕಲ್ಲು ತೂರಾಟ ನಡೆಸಿ ಹಾನಿಯುಂಟು ಮಾಡಿದ ಘಟನೆ ಮಂಗಳೂರಿನ ಸೆಂಟ್ ಆಗ್ನೇಸ್ ಕಾಲೇಜು ಮುಂಭಾಗದಲ್ಲಿ ನಡೆದಿದೆ.
ಕಲ್ಲೆಸತದಿಂದಾಗಿ ಕಟ್ಟಡ ಗಾಜುಗಳು ಪುಡಿ ಪುಡಿಯಾಗಿವೆ. ಸುಳ್ಯ ನಿವಾಸಿ ವಿವೇಕ್ (18) ಎಂಬಾತ ಪಿಜಿಯಲ್ಲಿ ಕೆಲಸ ಮಾಡುತ್ತಿದ್ದ ಯುವತಿಯನ್ನು ಪ್ರೀತಿಸುತ್ತಿದ್ದ. ನಿನ್ನೆ ಸಂಜೆ ಯುವತಿಯನ್ನು ತನ್ನೊಂದಿಗೆ ಔಟಿಂಗ್ ಬರುವಂತೆ ಒತ್ತಾಯಿಸಿದ್ದಾನೆ. ಆದರೆ ಯುವತಿ ನಿರಾಕರಿಸಿದ್ದು, ಆತನೊಂದಿಗೆ ಹೋಗಿಲ್ಲ ಇದಕ್ಕೆ ಸಿಟ್ಟಾದ ಯುವಕ ಆಕೆ ಕೆಲಸ ಮಾಡುತ್ತಿದ್ದ ಪಿಜಿ ಬಳಿ ಬಂದು ಕಟ್ಟಡದ ಮೇಲೆ ಕಲ್ಲು ತೂರಾಟ ನಡೆಸಿದ್ದಾನೆ.
ಯುವಕನ ರಂಪಾಟಕ್ಕೆ ಕಟ್ಟಡದ ಗಾಜುಗಳು ಪುಡಿಯಾಗಿ ಹಾನಿಯಾಗಿದ್ದು, ಸಾರ್ವಜನಿಕರು ಯುವಕನನ್ನು ಹಿಡಿದು ಥಳಿಸಿದ್ದಾರೆ.