ಮಂಗಳೂರು: ಸರ್ಕಾರದ ಅನುಮತಿಯನ್ನೇ ಪಡೆಯದೇ ಮೆಡಿಕಲ್ ಕಾಲೇಜೊಂದು ವಿದ್ಯಾರ್ಥಿಗಳಿಗೆ ಮೆಡಿಕಲ್ ಸೀಟ್ ಹಂಚಿ ಅಕ್ರಮವೆಸಗಿದೆ ಎಂಬ ಆರೋಪ ಕೇಳಿಬಂದಿದೆ.
ಕಡಲ ನಗರಿ ಮಂಗಳೂರಿನಲ್ಲಿ ಎಂಬಿಬಿಎಸ್ ಮೆಡಿಕಲ್ ಸೀಟ್ ಹೆಸರಲ್ಲಿನಲ್ಲಿ ಭಾರಿ ಗೋಲ್ ಮಾಲ್ ನಡೆದಿದೆ. ಮಂಗಳೂರಿನ ಜಿ.ಆರ್.ಮೆಡಿಕಲ್ ಕಾಲೇಜು ಸರ್ಕಾರದ ಅನುಮತಿಯನ್ನೇ ಪಡೆಯದೇ ವಿದ್ಯಾರ್ಥಿಗಳಿಗೆ ಮೆಡಿಕಲ್ ಸೀಟ್ ಮಾರಾಟ ಮಡಿದೆ. ಈ ಹಗರಣದ ಬಗ್ಗೆ ರಾಷ್ಟ್ರೀಯ ವೈದ್ಯಕೀಯ ಆಯೋಗ ಸಮಗ್ರ ತನಿಖೆಗೆ ಸೂಚಿಸಿದೆ.
ಅಲ್ಲದೇ ಪ್ರಕರಣದ ತನಿಖೆ ನಡೆಸುವಂತೆ ರಾಜ್ಯ ಸರ್ಕಾರಕ್ಕೆ ಆಯೋಗ ಪತ್ರ ಬರೆದಿದೆ. ಎರಡು ವರ್ಷಗಳ ಹಿಂದೆ ಮಂಗಳೂರಿನ ನೀರುಮಾರ್ಗದಲ್ಲಿ ಜಿ.ಆರ್.ಮೆಡಿಕಲ್ ಕಾಲೇಜು ಆರಂಭವಾಗಿತ್ತು. ಇದೀಗ ಲಕ್ಷಾಂತರ ರೂಪಾಯಿ ಶುಲ್ಕ ಕೊಟ್ಟು ಮೆಡಿಕಲ್ ಕಾಲೇಜಿನಲ್ಲಿ ಪ್ರವೇಶ ಪಡೆದ 150 ವಿದ್ಯಾರ್ಥಿಗಳ ಭವಿಷ್ಯವೇ ಅತಂತ್ರವಾಗಿದೆ.
ಸರ್ಕಾರದ ಅನುಮತಿ ಇಲ್ಲದೇ ಕಾಲೇಜು ಮೆಡಿಕಲ್ ಸೀಟು ನೀಡಿರುವುದು ಅಕ್ರಮ ಹಾಗೂ ಕಾನೂನು ಬಾಹಿರವಾಗಿದೆ. 2021-22ರಲ್ಲಿ ಎಂಎ ಆರ್ ಬಿ, ಮೆಡಿಕಲ್ ಕಾಲೇಜು ನಡೆಸಲು ಅನುಮತಿ ನೀಡಿತ್ತು. ಆದರೆ 2022ರ ಸೆಪ್ಟೆಂಬರ್ ನಲ್ಲಿ ಎಂಎ ಆರ್ ಬಿ ತಂಡ ಕಾಲೇಜಿನಲ್ಲಿ ಪರಿಶೀಲನೆ ನಡೆಸಿದಾಗ ರಿಸರ್ಚ್ ಸೆಂಟರ್, ನುರಿತ ಸಿಬ್ಬಂದಿ, ಅಗತ್ಯ ಮಾನದಂಡಗಳು ಇರಲಿಲ್ಲ ಎಂದು ಎರಡನೇ ಬ್ಯಾಚ್ ನಲ್ಲಿ ಎಂಬಿಬಿಎಸ್ ದಾಖಲಾತಿಗೆ ಅವಕಾಶ ನೀಡಿರಲಿಲ್ಲ. ಆದರೂ 2022-23ರನೇ ಸಾಲಿನಲ್ಲಿ ಕಾನೂನು ಬಾಹಿರವಾಗಿ 150 ವಿದ್ಯಾರ್ಥಿಗಳಿಗೆ ಮೆಡಿಕಲ್ ಸೀಟು ಹಂಚಿಕೆ ಮಾಡಿ ಕೋಟ್ಯಂತರ ಶುಲ್ಕ ಪಡೆದಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ವೈದ್ಯಕೀಯ ಆಯೋಗ ತನಿಖೆಗೆ ಸೂಚಿಸಿದೆ.