ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರಿನಲ್ಲಿ ಆಟೋ ರಿಕ್ಷಾದಲ್ಲಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಪೋಟ ಪ್ರಕರಣದ ಆರೋಪಿ ಶಾರಿಕ್ ಎಂಬುದು ದೃಢಪಟ್ಟಿದೆ.
ಸ್ಪೋಟದಲ್ಲಿ ಗಾಯಗೊಂಡ ಆರೋಪಿ ಮೊಹಮ್ಮದ್ ಶಾರಿಕ್ ಎನ್ನುವುದು ಗೊತ್ತಾಗಿದೆ. ಮಂಗಳೂರಿನಲ್ಲಿ ಗೋಡೆ ಬರಹ ಪ್ರಕರಣದ ಆರೋಪಿಯಾಗಿರುವ ಶಾರಿಕ್ ತುಂಗಾ ನದಿ ತೀರದಲ್ಲಿ ಬಾಂಬ್ ಸ್ಫೋಟದ ಪೂರ್ವ ತಯಾರಿ ನಡೆಸಿದ್ದ. ಮಂಗಳೂರಿನಲ್ಲಿ ಬಾಂಬ್ ಸ್ಪೋಟಿಸಲು ಹೊರಟಿದ್ದ ಎಂದು ಹೇಳಲಾಗಿದೆ.