
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ಹೊರವಲಯದ ಸುರತ್ಕಲ್ ಸಮೀಪ ಎನ್.ಐ.ಟಿ.ಕೆ. ಬೀಚ್ ನಲ್ಲಿ ಹಾಡಹಗಲೇ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿದ ಘಟನೆ ನಡೆದಿದ್ದು, ತಡವಾಗಿ ಬಳಕೆಗೆ ಬಂದಿದೆ.
ಜುಲೈ 27ರಂದು ಘಟನೆ ನಡೆದಿದೆ. ಪದವಿ ವಿದ್ಯಾರ್ಥಿನಿ ತನ್ನ ಸಹಪಾಠಿ ವಿದ್ಯಾರ್ಥಿಯೊಂದಿಗೆ ಬೀಚ್ ಬಳಿ ತೆರಳಿದ್ದ ವೇಳೆಯಲ್ಲಿ ವಿಡಿಯೋ ಮಾಡಿಕೊಂಡ 30 ವರ್ಷದ ಮುನಾಜ್ ಅಹಮದ್ ಬೆದರಿಸಿ ಅತ್ಯಾಚಾರ ಎಸಗಿದ್ದು, ತನ್ನ ಕೃತ್ಯದ ದೃಶ್ಯಗಳನ್ನು ವಿಡಿಯೋ ಮಾಡಿಕೊಂಡಿದ್ದಾನೆ. ಈ ವೇಳೆ ವಿದ್ಯಾರ್ಥಿನಿಯೊಂದಿಗೆ ಇದ್ದ ಸಹಪಾಠಿ ಪರಾರಿಯಾಗಿದ್ದಾನೆ ಎನ್ನಲಾಗಿದೆ.
ಕಾಮುಕ ಮುನಾಜ್ ನಂತರದಲ್ಲಿ ವಿದ್ಯಾರ್ಥಿನಿಗೆ ಪದೇ ಪದೇ ಕರೆ ಮಾಡಿ ಬೆತ್ತಲೆ ಫೋಟೋ ಕಳುಹಿಸುವಂತೆ ಪೀಡಿಸಿದ್ದಾನೆ. ನೊಂದ ಯುವತಿ ಸುರತ್ಕಲ್ ಠಾಣೆಗೆ ದೂರು ನೀಡಿದ್ದು, ನಂತರ ಮಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ.