
ಮಂಗಳೂರು: ಕೇರಳದಿಂದ ರಾಜ್ಯಕ್ಕೆ ಗಾಂಜಾ, ಡ್ರಗ್ಸ್ ಸಾಗಿಸುತ್ತಿದ್ದ ಮೂವರನ್ನು ಮಂಗಳೂರಿನ ಕೊಣಾಜೆ ಠಾಣೆ ಪೊಲೀಸರು ಬಂಧಿಸಿದ್ದಾರೆ.
27 ಲಕ್ಷ ರೂಪಾಯಿ ಮೌಲ್ಯದ 111 ಕೆಜಿ ಗಾಂಜಾ ಮತ್ತು ಮಾದಕ ದ್ರವ್ಯ ವಶಕ್ಕೆ ಪಡೆಯಲಾಗಿದೆ. ಕೇರಳದ ಕಾಸರಗೋಡಿನ ಅಬೂಬಕರ್ ಸಿದ್ದಖಿ ಅಲಿಯಾಸ್ ಹ್ಯಾರಿಸ್, ಎಂ ಅಖೀಲ್, ಹೈದರ್ ಅಲಿ ಅಲಿಯಾಸ್ ಗಾಡಿ ಐದರ್ ಎಂಬುವರನ್ನು ಬಂಧಿಸಲಾಗಿದೆ. ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.