
ಮಂಗಳೂರು: ಮಂಗಳೂರು -ಅಬುದಾಭಿ ನಡುವೆ ಜುಲೈ 22 ರಿಂದ ಹೆಚ್ಚುವರಿ ವಿಮಾನ ಹಾರಾಟ ಆರಂಭವಾಗಲಿದೆ. ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ಇಂದಿನಿಂದ ಅಬುದಾಭಿಗೆ ಹೆಚ್ಚುವರಿ ಸೇವೆ ನೀಡಲಿದೆ.
ಅಬುದಾಭಿಗೆ ರಾತ್ರಿ 8:15ಕ್ಕೆ ಹೊರಡಲಿದ್ದು, ಬೆಳಗ್ಗೆ 5.20ಕ್ಕೆ ಮಂಗಳೂರಿಗೆ ಆಗಮಿಸಲಿದೆ. ಈ ಹೊಸ ವಿಮಾನ ಸೋಮವಾರ, ಬುಧವಾರ, ಶುಕ್ರವಾರ ಮಂಗಳೂರಿನಿಂದ ನಿರ್ಗಮಿಸಲಿದೆ. ಅಬುದಾಭಿ ಮಾತ್ರವಲ್ಲದೆ, ಬಹರೇನ್, ದುಬೈ, ದಮನ್, ದೋಹಾ, ಜೆಡ್ಡಾ, ಮಸ್ಕತ್, ಕುವೈತ್ ಗಳಿಗೂ ಏರ್ ಇಂಡಿಯಾ ವಿಮಾನ ಸಂಚಾರ ಇರಲಿದೆ.
ಆಗಸ್ಟ್ 9 ರಿಂದ ಇಂಡಿಗೋ ವಿಮಾನ ಕೂಡ ಅಬುದಾಭಿಗೆ ದೈನಂದಿನ ವಿಮಾನಯಾನ ಪ್ರಾರಂಭಿಸಲಿದೆ. ಮಂಗಳೂರಿನಿಂದ ವಾರಕ್ಕೆ ನಾಲ್ಕು ವಿಮಾನಗಳು ದುಬೈಗೆ ಸಂಚರಿಸಲಿವೆ.