
ಮಂಗಳೂರು: ಇಂಡಿಗೋ ವಿಮಾನಕ್ಕೆ ಹಕ್ಕಿ ಡಿಕ್ಕಿ ಹೊಡೆದ ಘಟನೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ನಡೆದಿದೆ. ಪೈಲಟ್ ಸಮಯ ಪ್ರಜ್ಞೆಯಿಂದಾಗಿ ಭಾರಿ ಅನಾಹುತವೊಂದು ತಪ್ಪಿದೆ.
ಮಂಗಳೂರಿನಿಂದ ದುಬೈಗೆ ತೆರಳಬೇಕಿದ್ದ ವಿಮಾನ ಟೇಕ್ ಆಫ್ ಗೆ ಸಿದ್ಧವಾಗುತ್ತಿದ್ದಂತೆ ವಿಮಾನದ ರಕ್ಕೆಗೆ ಹಕ್ಕಿ ಡಿಕ್ಕಿಹೊಡೆದಿದೆ. ಬೆಳಿಗ್ಗೆ 8:30ಕ್ಕೆ ಈ ಘಟನೆ ಸಂಭವಿಸಿದೆ.
ಅಪಾಯದ ಸೂಚನೆ ಅರಿತು ಪೈಲಟ್ ಮಾಹಿತಿ ನೀಡಿದ್ದು, ವಿಮಾನವನ್ನು ತಕ್ಷಣ ಲ್ಯಾಂಡಿಂಗ್ ಮಾಡಲಾಗಿದೆ. ಪ್ರಯಾಣಿಕರಿಗೆ ದುಬೈಗೆ ತೆರಳಲು ಮತ್ತೊಂದು ವಿಮಾನ ವ್ಯವಸ್ಥೆ ಮಾಡಲಾಗಿದೆ.