alex Certify ರಾಜ್ಯದ ಜನತೆಗೆ ಗುಡ್ ನ್ಯೂಸ್: ಮಂಗಳೂರಿನಿಂದ ಸಿಂಗಾಪುರ, ದೆಹಲಿ, ಪುಣೆಗೆ ನೇರ ವಿಮಾನ ಹೊಸ ವರ್ಷದಿಂದ ಆರಂಭ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಜ್ಯದ ಜನತೆಗೆ ಗುಡ್ ನ್ಯೂಸ್: ಮಂಗಳೂರಿನಿಂದ ಸಿಂಗಾಪುರ, ದೆಹಲಿ, ಪುಣೆಗೆ ನೇರ ವಿಮಾನ ಹೊಸ ವರ್ಷದಿಂದ ಆರಂಭ

ಮಂಗಳೂರು: ಮಂಗಳೂರಿನಿಂದ ಸಿಂಗಾಪುರ, ದೆಹಲಿ, ಪುಣೆಗೆ ನೇರ ವಿಮಾನ ಹೊಸ ವರ್ಷದಿಂದ ಆರಂಭವಾಗಲಿದೆ.

ಏರ್ ಇಂಡಿಯಾ ವತಿಯಿಂದ ಮಂಗಳೂರು -ಸಿಂಗಾಪುರದ ಚಾಂಗಿ, ಮಂಗಳೂರು –ದೆಹಲಿ, ಮಂಗಳೂರು -ಪುಣೆ ನಡುವೆ ನೇರ ವಿಮಾನ ಯಾನ ಸೌಲಭ್ಯ ಕಲ್ಪಿಸಲಾಗುವುದು. ಜನವರಿ 21ರಿಂದ ಮಂಗಳೂರು -ಸಿಂಗಾಪುರ ನಡುವೆ ಎರಡು ವಿಮಾನ ಸಂಚಾರ ಆರಂಭವಾಗಲಿದೆ.

ಫೆಬ್ರವರಿ 1ರಿಂದ ಮಂಗಳೂರು -ದೆಹಲಿಗೆ ಪ್ರತಿದಿನ ನಾನ್ ಸ್ಟಾಪ್ ವಿಮಾನ ಸಂಚಾರ ಆರಂಭವಾಗಲಿದ್ದು, ಪ್ರತಿ ಶನಿವಾರ ಮಂಗಳೂರು -ಪುಣೆ ನಡುವೆ ಎರಡು ನೇರ ವಿಮಾನಯನ ಸೌಲಭ್ಯ ಆರಂಭಿಸಲಾಗುವುದು ಎಂದು ಏರ್ ಇಂಡಿಯಾ ಘೋಷಿಸಿದೆ.

ಮಂಗಳೂರಿನಿಂದ ಪ್ರತಿದಿನ ಬೆಳಗ್ಗೆ 6:40ಕ್ಕೆ ಹೊರಡುವ ವಿಮಾನ ದೆಹಲಿಗೆ 9:35 ಕ್ಕೆ ತಲುಪುವುದು. ದೆಹಲಿಯಿಂದ 6.40ಕ್ಕೆ ಹೊರಡುವ ವಿಮಾನ ಮಂಗಳೂರಿಗೆ 9:35 ಕ್ಕೆ ತಲುಪುತ್ತದೆ.

ಮಂಗಳೂರಿನಿಂದ ಶನಿವಾರ ಬೆಳಗ್ಗೆ 8 ಗಂಟೆಗೆ ಹೊರಡುವ ವಿಮಾನ 9:25ಕ್ಕೆ ಪುಣೆ ತಲುಪಲಿದೆ. 9:55 ಕ್ಕೆ ಪುಣೆಯಿಂದ ಹೊರಟು 11:40ಕ್ಕೆ ಮಂಗಳೂರಿಗೆ ಆಗಮಿಸಲಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...