ಮಂಗಳೂರು: ಮೊಬೈಲ್ ಕದ್ದ ಆರೋಪದ ಮೇಲೆ ಮೀನುಗಾರರನ್ನು ತಲೆಕೆಳಗೆ ಮಾಡಿ ನೇತುಹಾಕಿ ಶಿಕ್ಷೆ ನೀಡಿದ ಘಟನೆ ನಡೆದಿದ್ದು, ವಿಡಿಯೋ ವೈರಲ್ ಆದ ಬಳಿಕ ಘಟನೆ ಬೆಳಕಿಗೆ ಬಂದಿದೆ.
ಆಂಧ್ರಪ್ರದೇಶ ಮೂಲದ ಮೀನುಗಾರ ವೈಲ್ ಶೀನು ನನ್ನ ಬೋಟ್ ನಲ್ಲಿ ಉಲ್ಟಾ ನೇತುಹಾಕಿ ಶಿಕ್ಷೆ ನೀಡಿ, ಮೊಬೈಲ್ ಕಳವಿನ ಬಗ್ಗೆ ವಿಚಾರಣೆ ನಡೆಸಲಾಗಿದೆ. ಆತ ಗೋಗರೆದರೂ, ಬಿಡದೆ ಶಿಕ್ಷೆ ನೀಡಲಾಗಿದೆ. ಮೊಬೈಲ್ ಕಳವು ಮಾಡಿದ ಆರೋಪದಲ್ಲಿ ಆಂಧ್ರಪ್ರದೇಶ ಮೂಲದ ಕಾರ್ಮಿಕರು ನೇತುಹಾಕಿ ಶಿಕ್ಷೆ ನೀಡಿದ್ದಾರೆ. ಪಾಂಡೇಶ್ವರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ ಎಂದು ಹೇಳಲಾಗಿದೆ.