alex Certify ಚುರುಕುಗೊಂಡ ಮಂಗಳೂರು ಕುಕ್ಕರ್ ಬಾಂಬ್ ಸ್ಪೋಟದ ಎನ್ಐಎ ತನಿಖೆ: ಆರೋಪಿಗಳು ಶಿವಮೊಗ್ಗಕ್ಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚುರುಕುಗೊಂಡ ಮಂಗಳೂರು ಕುಕ್ಕರ್ ಬಾಂಬ್ ಸ್ಪೋಟದ ಎನ್ಐಎ ತನಿಖೆ: ಆರೋಪಿಗಳು ಶಿವಮೊಗ್ಗಕ್ಕೆ

ಶಿವಮೊಗ್ಗ: ಮಂಗಳೂರಿನಲ್ಲಿ ಆಟೋದಲ್ಲಿ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ತನಿಖೆಯನ್ನು ಎನ್ಐಎ ಅಧಿಕಾರಿಗಳು ಚುರುಕುಗೊಳಿಸಿದ್ದಾರೆ.

ಶಿವಮೊಗ್ಗಕ್ಕೆ ಆರೋಪಿ ಶಾರಿಕ್ ಮತ್ತು ಜಬಿವುಲ್ಲಾ ಅವರನ್ನು ಕರೆದುಕೊಂಡು ಬಂದ ಎನ್ಐಎ ಅಧಿಕಾರಿಗಳ ತಂಡ ಶಿವಮೊಗ್ಗ ಟ್ರಯಲ್ ಬ್ಲಾಸ್ಟ್ ಪ್ರಕರಣದ ಕುರಿತು ಮಾಹಿತಿ ಸಂಗ್ರಹಿಸಿದೆ. ಟ್ರಯಲ್ ಬ್ಲಾಸ್ಟ್ ಪ್ರಕರಣದ ಪ್ರಮುಖ ಆರೋಪಿ ಶಾರಿಕ್ ಆಗಿದ್ದು, ಪ್ರಕರಣದಲ್ಲಿ ಜಬಿವುಲ್ಲಾ ಪಾತ್ರದ ಬಗ್ಗೆ ಎನ್ಐಎ ತಂಡದಿಂದ ತನಿಖೆ ನಡೆಸಲಾಗಿದೆ. ಜಬಿವುಲ್ಲಾ ಶಿವಮೊಗ್ಗದ ಪ್ರೇಮ್ ಚಂದ್ ಗೆ ಚಾಕು ಇರಿತ ಪ್ರಕರಣದ ಆರೋಪಿಯಾಗಿದ್ದಾನೆ.

ಇವರನ್ನು ಶಿವಮೊಗ್ಗದ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣ, ನಿಲ್ದಾಣದ ಎದುರಿನ ಹೋಟೆಲ್ ಸಮೀಪ ಕರೆತಂದು ಸ್ಥಳ ಮಹಜರು ಮಾಡಲಾಗಿದೆ. ನಿನ್ನೆ ರಾತ್ರಿ ಎನ್ಐಎ ಅಧಿಕಾರಿಗಳ ತಂಡದಿಂದ ಆರೋಪಿಗಳನ್ನು ಕರೆತಂದು ಸ್ಥಳ ಮಹಜರು ನಡೆಸಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...