
ಹಾಸನ: ಮಂಗಳೂರು-ಬೆಂಗಳೂರು ಖಾಸಗಿ ಬಸ್ ತಡೆದು ನಿಲ್ಲಿಸಿ, ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿರುವ ಘಟನೆ ಹಾಸನ ಹೊರವಲಯದ ಬೈಪಾಸ್ ರಸ್ತೆಯಲ್ಲಿ ನಡೆದಿದೆ.
ಬೆಂಗಳೂರಿನಿಂದ ಮಂಗಳೂರಿಗೆ ತೆರಳುತ್ತಿದ್ದ ಬಸ್ ನ್ನು ದೇವರಾಯಪಟ್ಟಣದ ಬಳಿ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಅಡ್ಡಗಟ್ಟಿ ನಿಲ್ಲಿಸಿದ್ದಾರೆ. ಕಾರಿನಿಂದ ಇಳಿದು ಬಂದ ಗ್ಯಾಂಗ್ ಬಸ್ ನ ಗಾಜುಗಳನ್ನು ಒಡೆದು ಗಲಾಟೆ ಮಾಡಿದ್ದಾರೆ.
ಓರ್ವ ವ್ಯಕ್ತಿ ಲಾಂಗ್ ಕೈಯಲ್ಲಿ ಹಿಡಿದು ಬಂದು ಬಸ್ ನ ಗಾಜುಗಳನ್ನು ಒಡೆದಿದ್ದಾನೆ. ಬಸ್ ನಲ್ಲಿದ್ದ ಪ್ರಯಾಣಿಕರು ಕಂಗಾಲಾಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿಯೂ ದುಷ್ಕರ್ಮಿಗಳ ಅಟ್ಟಹಾಸ ವೈರಲ್ ಆಗಿದೆ.