ಮಂಗಳೂರು: ಕರ್ತವ್ಯದ ವೇಳೆಯಲ್ಲಿ ಹೃದಯಘಾತವಾಗಿ ಗುಪ್ತಚರ ಇಲಾಖೆ ಎಎಸ್ಐ ಸಾವನ್ನಪ್ಪಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಉರ್ವ ಮಾರಿಗುಡಿ ನಿವಾಸಿ ರಾಜೇಶ್ ಬಿ.ಯು.(45) ಮೃತಪಟ್ಟವರು ಎಂದು ಹೇಳಲಾಗಿದೆ. ಮಧ್ಯಾಹ್ನ ಗುಪ್ತಚರ ಇಲಾಖೆ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆಯಲ್ಲಿಯೇ ರಾಜೇಶ್ ಅವರಿಗೆ ಎದೆ ನೋವು ಕಾಣಿಸಿಕೊಂಡಿದೆ. ತಕ್ಷಣ ವಿಶ್ರಾಂತಿ ಕೊಠಡಿಗೆ ತೆರಳಿದ ಅವರು ವಿಶ್ರಾಂತಿ ಪಡೆಯಲು ಮುಂದಾಗಿದ್ದು, ಈ ವೇಳೆ ಕುಸಿದುಬಿದ್ದು ಮೃತಪಟ್ಟಿದ್ದಾರೆನ್ನಲಾಗಿದೆ.
1993 ಬ್ಯಾಚ್ ಪೊಲೀಸ್ ಸಿಬ್ಬಂದಿಯಾಗಿರುವ ರಾಜೇಶ್ ಅವರು ಮಂಗಳೂರು ಸೂರತ್ಕಲ್, ಪಣಂಬೂರು ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸಿದ್ದರು.