ಮಂಗಳೂರು: ಅಂತರರಾಷ್ಟ್ರೀಯ ವಿಮಾನ ನಿಲ್ದಾಣ 2024ರ ಜನವರಿ 1ರಿಂದ ಪ್ರಯಾಣಿಕರ ಹೆಚ್ಚಳದೊಂದಿಗೆ ಹೊಸ ದಾಖಲೆ ಬರೆದಿದೆ.
1,38,902 ದೇಶಿಯ, 63,990 ಅಂತರರಾಷ್ಟ್ರೀಯ ಪ್ರಯಾಣಿಕರು ಸೇರಿದಂತೆ 2,02,892 ಪ್ರಯಾಣಿಕರ ಸಹಿತ ಉತ್ತಮ ಸಾಧನೆ ಮಾಡಿದೆ. ಮೂಲ ಸೌಕರ್ಯ ಅಭಿವೃದ್ಧಿಗೆ ಸಂಬಂಧಿಸಿದಂತೆ 2450 ಮೀಟರ್ ರನ್ ವೇ ರೀ ಕಾರ್ಪೆಟಿಂಗ್ ಯೋಜನೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಪ್ರತಿಷ್ಠಿತ ಬಿಲ್ಡ್ ಇಂಡಿಯಾ ಇನ್ಫ್ರಾ ಪ್ರಶಸ್ತಿಯನ್ನು ಮಂಗಳೂರು ಏರ್ಪೋರ್ಟ್ ಪಡೆದುಕೊಂಡಿದೆ.
ಹೊಸ ಸಂಪರ್ಕ ಮಾರ್ಗಗಳು ಮತ್ತು ಹಾರಾಟವನ್ನು ವಿಸ್ತರಿಸಿದೆ. ಏರ್ ಇಂಡಿಯಾ ಎಕ್ಸ್ಪ್ರೆಸ್ ಬೆಂಗಳೂರಿನ ಮೂಲಕ ಚೆನ್ನೈ ಮತ್ತು ಮಂಗಳೂರನ್ನು ಸಂಪರ್ಕಿಸುವ ಬೋಯಿಂಗ್ 737- 8 ಸೇವೆ ಆರಂಭಿಸಿದೆ. ಇಂಡಿಗೋ ತನ್ನ ನೇರ ವಿಮಾನಗಳನ್ನು ಚೆನ್ನೈಗೆ ಹೆಚ್ಚಿಸಿದೆ.
‘ವಿಂಗ್ಸ್ ಇಂಡಿಯಾ’ ಏಷ್ಯಾದ ಅತಿ ದೊಡ್ಡ ನಾಗರಿಕ ವಿಮಾನಯಾನ ಪ್ರದರ್ಶನದಲ್ಲಿ ಐದು ಮಿಲಿಯನ್ ಗಿಂತ ಕಡಿಮೆ ಪ್ರಯಾಣಿಕರ ವಿಭಾಗದಲ್ಲಿ ಮಂಗಳೂರು ಏರ್ ಪೋರ್ಟ್ ಅತ್ಯುತ್ತಮ ವಿಮಾನ ನಿಲ್ದಾಣ ಎಂದು ಗುರುತಿಸಲ್ಪಟ್ಟಿದೆ.