![](https://kannadadunia.com/wp-content/uploads/2020/01/gold-1578290697.jpg)
ಮಂಗಳೂರು: ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಚಿನ್ನ ಸಾಗಿಸುತ್ತಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ. ಬಂಧಿತನಿಂದ 1.23 ಕೆಜಿ ಚಿನ್ನ ವಶಕ್ಕೆ ಪಡೆಯಲಾಗಿದೆ.
ಕೇರಳ ಕಾಸರಗೋಡು ಮೂಲದ ಇಸ್ಮಾಯಿಲ್ ಅಹಮ್ಮದ್ ಬಂಧಿತ ವ್ಯಕ್ತಿ. ದುಬೈನಿಂದ ಮಂಗಳೂರಿಗೆ ಆಗಮಿಸಿದ ಇಸ್ಮಾಯಿಲ್ ಅಂಟಿನಲ್ಲಿ ಚಿನ್ನದ ಪುಡಿಯನ್ನು ಸೇರಿಸಿಕೊಂಡು ಅದನ್ನು ಒಳಉಡುಪಿನಲ್ಲಿಟ್ಟುಕೊಂಡಿದ್ದ. ಅಲ್ಲದೆ ಸರಪಳಿಯ ರೂಪದಲ್ಲಿದ್ದ ಚಿನ್ನವನ್ನು ಕೂಡ ಸಾಗಿಸುತ್ತಿರುವುದು ಗೊತ್ತಾಗಿದೆ.
ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಪರಿಶೀಲನೆ ಮಾಡಿದಾಗ ಅಕ್ರಮವಾಗಿ ಚಿನ್ನ ಸಾಗಿಸುತ್ತಿರುವುದು ಕಂಡುಬಂದಿದ್ದು ಆತನನ್ನು ಬಂಧಿಸಲಾಗಿದೆ. 57.14 ಲಕ್ಷ ರೂಪಾಯಿ ಮೌಲ್ಯದ 1.23 ಕೆಜಿ ಚಿನ್ನ ವಶಕ್ಕೆ ಪಡೆಯಲಾಗಿದೆ.