
ಮಂಗಳೂರು: ಮಂಗಳೂರಿನ ಕಾರಾಗೃಹದಲ್ಲಿರುವ ಕೈದಿಗಳಿಗೆ ಫುಡ್ ಪಾಯಿಸನ್ ನಿಂದ ಅಸ್ವಸ್ಥರಾಗಿದ್ದು, ಹೊಟ್ಟೆ ನೋವಿನಿಂದ ಆಸ್ಪತ್ರೆಗೆ ದಾಖಲಾಗಿರುವ ಘಟನೆ ನಡೆದಿದೆ.
ಮಂಗಳೂರು ಕೇಂದ್ರ ಕಾರಾಗೃಹದಲ್ಲಿರುವ 15 ಕೈದಿಗಳು ಹೊಟ್ಟೆನೋವಿಂದ ಬಳಲುತ್ತಿದ್ದು, ವಾಂತಿಯಿಂದ ನರಳಾಡಿದ್ದಾರೆ. ಏಕಾಏಕಿ ಕೈದಿಗಳು ಜೈಲಿನಲ್ಲಿಯೇ ಬಿದ್ದು ಹೊರಳಾಡಿದ್ದು, ಕೆಲವರು ಪ್ರಜ್ಞಾಹೀನ ಸ್ಥಿತಿ ತಲುಪಿದ್ದಾರೆ.
ತಕ್ಷಣ ಕೈದಿಗಳನ್ನು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗಿದೆ. ಫುಡ್ ಪಾಯಿಸನ್ ನಿಂದ ಅನಾರೋಗ್ಯಕ್ಕೀಡಾಗಿದ್ದಾರೆ ಎಂದು ತಿಳಿದುಬಂದಿದೆ.