ಪೋಷಕರು ಓದಲು ಪೀಡಿಸುತ್ತಾರೆ ಎಂಬ ಕಾರಣಕ್ಕೆ ಮನೆ ಬಿಟ್ಟಿದ್ದ ಏಳು ಮಂದಿ ಮಕ್ಕಳು ಕೊನೆಗೂ ಪತ್ತೆಯಾಗಿದ್ದಾರೆ. ನಿನ್ನೆ ಮೂವರು ಮಕ್ಕಳು ಪತ್ತೆಯಾಗಿದ್ದರೆ ಇಂದು ನಾಲ್ವರು ಮಕ್ಕಳು ಮಂಗಳೂರಿನಲ್ಲಿ ಪತ್ತೆಯಾಗಿದ್ದಾರೆ. ಸೋಲದೇವನಹಳ್ಳಿ ಅಪಾರ್ಟ್ಮೆಂಟ್ನಿಂದ ನಾಪತ್ತೆಯಾಗಿದ್ದ ಮಕ್ಕಳು ಬೆಂಗಳೂರು, ಬೆಳಗಾವಿ, ಮೈಸೂರು ಹಾಗೂ ಮಂಗಳೂರಿಗೆ ಪ್ರಯಾಣ ಬೆಳೆಸಿದ್ದರು.
ಇನ್ನು ಮಂಗಳೂರಿನಲ್ಲಿ ಪತ್ತೆಯಾದ ಮಕ್ಕಳ ಬಗ್ಗೆ ಮಂಗಳೂರು ಡಿಸಿಪಿ ಹರಿರಾಮ್ ಶಂಕರ್ ಪ್ರತಿಕ್ರಿಯಿಸಿದ್ದಾರೆ. ಮಕ್ಕಳು ಒಟ್ಟಿಗೆ ಇರಬೇಕು ಹಾಗೂ ಹಾಸ್ಟೆಲ್ಗೆ ಕಳುಹಿಸಿ ಬೇರೆ ಮಾಡುತ್ತಾರೆ ಎಂಬ ಕಾರಣಕ್ಕೆ ತಾವು ಮನೆ ಬಿಟ್ಟಿದ್ದಾಗಿ ಹೇಳಿದ್ದಾರೆ. ಆದರೆ ಈ ಬಗ್ಗೆ ಹೆಚ್ಚಿನ ತನಿಖೆ ಆಗಬೇಕಿದೆ. ಮಕ್ಕಳ ಜೊತೆಯಲ್ಲಿ ಇರುವ ಯುವತಿಯ ಇರಾದೆ ಏನಿತ್ತು ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ ಎಂದು ಹೇಳಿದ್ರು.
ದುರ್ಗಾ ಮಾತೆ ಪೆಂಡಾಲ್ ನಲ್ಲಿ ವಲಸಿಗರ ಸಮಸ್ಯೆ ವಿವರಿಸುವ ಥೀಮ್
ಮಂಗಳೂರಿಗೆ ಬಂದ ಇವರು ಚಿನ್ನಾಭರಣ ತುಂಬಿದ್ದ ಬ್ಯಾಗ್ಗಳನ್ನು ಎಸೆಯಲು ಯತ್ನಿಸಿದ್ದರು. ಇದು ಸ್ಥಳೀಯರಿಗೆ ಅನುಮಾನ ಮೂಡುವಂತೆ ಮಾಡಿದೆ. ಸದ್ಯ ಈ ಬ್ಯಾಗುಗಳನ್ನು ವಶಕ್ಕೆ ಪಡೆದಿದ್ದೇವೆ. ಮಂಗಳೂರಿಗೆ ಬಂದ ಮೇಲೆ ಹಣ ಖಾಲಿ ಆಗಿದೆ. ಹೀಗಾಗಿ ಸಂಬಂಧಿಕರಿಗೆ ಕರೆ ಕೂಡ ಮಾಡಿದ್ದಾರೆ. ಇವರೆಲ್ಲ ಹಳ್ಳಿಯ ಜೀವನ ನಡೆಸಬೇಕೆಂದು ಮಂಗಳೂರಿಗೆ ಬಂದಿದ್ದರು ಎನ್ನಲಾಗಿದೆ. ಆದರೆ ತನಿಖೆ ಬಳಿಕವಷ್ಟೇ ನಿಜವಾದ ಕಾರಣ ತಿಳಿಯಲಿದೆ ಎಂದು ಹೇಳಿದ್ದಾರೆ.