ಗ್ರಹ-ನಕ್ಷತ್ರಗಳು ಮನುಷ್ಯನ ಜೀವನದ ಮೇಲೆ ಪ್ರಭಾವ ಬೀರುತ್ತವೆ. ಗ್ರಹ ಬದಲಾವಣೆಯಾದಾಗ ರಾಶಿಗಳು ಪ್ರಭಾವಕ್ಕೊಳಗಾಗುತ್ತವೆ. ಸೆಪ್ಟೆಂಬರ್ 6ರಂದು ಎರಡು ಗ್ರಹಗಳ ತಮ್ಮ ರಾಶಿಯನ್ನು ಬದಲಾಯಿಸಲಿವೆ. ಇದು ಕೆಲ ರಾಶಿಗಳ ಮೇಲೆ ಪ್ರಭಾವ ಬೀರಲಿದೆ.
ಸೆಪ್ಟೆಂಬರ್ ಆರರಂದು ಶುಕ್ರ ತನ್ನ ಸ್ವಂತ ರಾಶಿ, ತುಲಾ ರಾಶಿಗೆ ಪ್ರವೇಶ ಮಾಡಲಿದ್ದಾನೆ. ಮಂಗಳ ಗ್ರಹ ಕನ್ಯಾ ರಾಶಿಯನ್ನು ಪ್ರವೇಶ ಮಾಡಲಿದೆ. ಅಕ್ಟೋಬರ್ ಎರಡರವರೆಗೆ ಶುಕ್ರ ಅದೇ ರಾಶಿಯಲ್ಲಿರಲಿದ್ದಾನೆ. ಅಕ್ಟೋಬರ್ 22ರಂದು ಮಂಗಳ, ತುಲಾ ರಾಶಿಗೆ ಪ್ರವೇಶ ಮಾಡಲಿದ್ದಾನೆ.
ಶುಕ್ರ, ತುಲಾ ಹಾಗೂ ವೃಶ್ಚಿಕ ರಾಶಿಯ ಒಡೆಯ. ಶುಕ್ರನ ಬದಲಾವಣೆ ಪ್ರೇಮ ಸಂಬಂಧ, ಕೌಟುಂಬಿಕ ಜೀವನ, ವೃತ್ತಿ ಜೀವನದ ಮೇಲೆ ಪ್ರಭಾವ ಬೀರುತ್ತದೆ. ಸೆಪ್ಟೆಂಬರ್ 6ರಂದು ಗ್ರಹ ಬದಲಾವಣೆ ಮೇಷ, ಕರ್ಕ, ವೃಶ್ಚಿಕ ರಾಶಿಯ ಮೇಲೆ ಪ್ರಭಾವ ಬೀರಲಿದೆ. ಇವರ ಜೀವನದಲ್ಲಿ ಸುಖ-ಸಂತೋಷ ಪ್ರಾಪ್ತಿಯಾಗಲಿದೆ. ಅದೃಷ್ಟ ಬದಲಾಗುವ ಸಾಧ್ಯತೆಯಿದೆ.
ಇದೇ ವೇಳೆ ವೃಷಭ, ಸಿಂಹ ಹಾಗೂ ಮೇಷ ರಾಶಿಯವರು ಎಚ್ಚರಿಕೆಯಿಂದಿರಬೇಕಾಗುತ್ತದೆ. ಈ ಸಮಯದಲ್ಲಿ ಸಮಸ್ಯೆ ಎದುರಾಗುತ್ತದೆ. ಕೆಲ ಸಮಯ ಮಾತ್ರ ಇರುವ ಸಮಸ್ಯೆ ನಂತ್ರ ಮಾಯವಾಗಲಿದೆ. ಈ ಸಂದರ್ಭದಲ್ಲಿ ದುಡುಕದೆ, ಹೆಜ್ಜೆ ಇಡಬೇಕು.
ಮಂಗಳ ಗ್ರಹವನ್ನು ಶಾಂತಗೊಳಿಸಲು, ಮಂಗಳವಾರ ಸಾಲ ಪಡೆಯಬೇಡಿ. ಭಗವಂತ ಕಾರ್ತಿಕೇಯನ ಪೂಜೆ ಮಾಡಿ. ಮಂಗಳವಾರ ಉಪವಾಸ ಮಾಡಿ. ಹಾಗೆ ಶುಕ್ರ ಗ್ರಹವನ್ನು ಶಾಂತಗೊಳಿಸಲು ಬಿಳಿ ಹಾಗೂ ಗುಲಾಬಿ ಬಣ್ಣದ ಬಟ್ಟೆ ಧರಿಸಿ. ಮಹಿಳೆಯರನ್ನು ನಿಂದಿಸಬೇಡಿ. ಮಹಿಳೆಯರಿಗೆ ಗೌರವ ನೀಡಿ. ತಾಯಿ ಲಕ್ಷ್ಮಿಯ ಪೂಜೆ ಮಾಡಿ.