ಮಾಜಿ ಸಚಿವ ಹಾಗೂ ಬಿಜೆಪಿ ಶಾಸಕ ಅಜಯ್ ವಿಷ್ಣೋಯಿ ಶನಿವಾರ ಮೇನಕಾ ಗಾಂಧಿ ವಿರುದ್ಧ ಹರಿಹಾಯ್ದಿದ್ದಿದ್ದು, ಪಶು ವೈದ್ಯರ ವಿರುದ್ಧ ಮೇನಕಾ ನೀಡಿರುವ ಹೇಳಿಕೆಯನ್ನ ಖಂಡಿಸಿದ್ದಾರೆ. ಅಲ್ಲದೇ ಆಕೆ ತಮ್ಮ ಪಕ್ಷದ ಸಂಸದೆ ಎಂದು ಹೇಳಿಕೊಳ್ಳೋದಕ್ಕೂ ನನಗೆ ನಾಚಿಕೆ ಎನಿಸುತ್ತಿದೆ ಎಂದು ಜರಿದಿದ್ದಾರೆ.
ಪಶು ವೈದ್ಯ ವಿಕಾಸ್ ಶರ್ಮಾ ವಿರುದ್ಧ ಬಿಜೆಪಿ ಸಂಸದೆ ಮೇನಕಾ ಗಾಂಧಿ ಬಳಕೆ ಮಾಡಿರುವ ಶಬ್ದಗಳು ನೋಡ್ತಿದ್ರೆ ಜಬಲಾಪುರ ಪಶುವೈದ್ಯಕೀಯ ಕಾಲೇಜು ಸರಿ ಇಲ್ಲ ಎಂದೆನಿಸತ್ತಿಲ್ಲ. ಬದಲಾಗಿ ಈಕೆ ಎಂತ ಮಹಿಳೆ ಅನ್ನೋದನ್ನ ಸಾಬೀತು ಪಡಿಸುವಂತಿದೆ. ಇವರು ನಮ್ಮ ಪಕ್ಷದ ಸಂಸದೆ ಎಂದು ಹೇಳಲು ನನಗೆ ಮುಜುಗುರವಾಗುತ್ತಿದೆ ಎಂದು ಟ್ವೀಟಾಯಿಸಿದ್ದಾರೆ.
ಮೂವರು ಪಶು ವೈದ್ಯರಿಗೆ ದೂರವಾಣಿ ಕರೆಯಲ್ಲಿ ಮಾಡಿರುವ ನಿಂದನೆ ಹಾಗೂ ಬೆದರಿಕೆಗಳ ಆಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಬಳಿಕ ಮೇನಕಾ ಗಾಂಧಿ ವಿವಾದಕ್ಕೀಡಾಗಿದ್ದಾರೆ. ಮೇನಕಾ ಗಾಂಧಿ ದರ್ಪದ ವಿರುದ್ಧ ಆಕ್ರೋಶ ಹೊರಹಾಕಿರುವ ಭಾರತೀಯ ಪಶು ವೈದ್ಯಕೀಯ ಸಂಘ ಬುಧವಾರ ದೇಶಾದ್ಯಂತ ಕಪ್ಪು ದಿನವನ್ನ ಆಚರಿಸಿದೆ.