
ಮಂಡ್ಯ: ಗೃಹಿಣಿಯೊಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಮಂಡ್ಯ ತಾಲೂಕಿನ ಕೆ.ಗೌಡಗೆರೆ ಗ್ರಾಮದಲ್ಲಿ ನಡೆದಿದೆ.
26 ವರ್ಷದ ಜಾಹ್ನವಿ ಮೃತ ಮಹಿಳೆ. ಪತಿ ಯಶ್ವಂತ್ ವಿರುದ್ಧ ಜಾಹ್ನವಿ ಪೋಷಕರು ಕೊಲೆ ಆರೋಪ ಮಾಡಿದ್ದಾರೆ. ಪತ್ನಿಯನ್ನು ಕೊಂದು ಬಾವಿಗೆ ಎಸೆದಿದ್ದಾನೆ ಎಂದು ಕಣ್ಣೀರಿಟ್ಟಿದ್ದಾರೆ.
ನಿಮ್ಮ ಮಗಳು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಆಕೆಯ ಪೋಷಕರಿಗೆ ಯಶ್ವಂತ್ ಕರೆ ಮಾಡಿದ್ದಾನೆ. ಪೋಷಕರು ಹಾಗೂ ಸಂಬಂಧಿಕರು ಬಂದು ನೋಡಿದಾಗ ಜಾಹ್ನವಿ ಮೃತದೇಹದ ಮೇಲೆ, ಮುಖದ ಮೇಲೆ ಗಾಯಗಳಾಗಿದ್ದು, ರಕ್ತದ ಕಲೆಗಳಿದ್ದವು. ಅಳಿಯನೇ ಮಗಳನ್ನು ಹತ್ಯೆ ಮಾಡಿದ್ದಾನೆ ಎಂದು ಆರೋಪಿಸಿದ್ದಾರೆ.
ಮೂರು ವರ್ಷಗಳ ಹಿಂದೆ ಜಾಹ್ನವಿಯನ್ನು ಯಶ್ವಂತ್ ಗೆ ಮದುವೆ ಮಾಡಿಕೊಡಲಾಗಿತ್ತು. ಒಂದು ವರ್ಷ ಚನ್ನಾಗಿಯೇ ಇದ್ದರು. ಬರ ಬರುತ್ತಾ ಪತ್ನಿಗೆ ಹಿಂಸೆ ನೀಡುವುದು, ಕುಡಿದು ಬಂದು ಮನಸೋ ಇಚ್ಚೆ ಹೊಡೆಯುವುದು, ಬಾಯಿಗೆ ಬಂದಂತೆ ಮಾತನಾಡಿ ಅವಮಾನಿಸುವುದು ಮಾಡುತ್ತಿದ್ದನಂತೆ. ಪತಿಯ ಕಾಟಕ್ಕೆ ಜಾಹ್ನವಿ ಬೇಸತ್ತು ಹೋಗಿದ್ದಳು. ಈಗ ಇದ್ದಕ್ಕಿದ್ದಂತೆ ಬಾವಿಯಲ್ಲಿ ಹೆಣವಾಗಿ ಪತ್ತೆಯಾಗಿದ್ದು, ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ.