ಮಂಡ್ಯ: ಮಂಡ್ಯ ಜಿಲ್ಲೆಯ ತಿಬ್ಬನಹಳ್ಳಿ ಬಳಿ ಚಾಲಕ ನಿಯಂತ್ರಣ ತಪ್ಪಿದ ಕಾರು ವಿಸಿನಾಲೆಗೆ ಬಿದ್ದು ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೋರ್ವ ವ್ಯಕ್ತಿ ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ ಮೂರಕ್ಕೇರಿದೆ.
ತಿಬನಹಳ್ಳಿಬಳಿಯ ವಿಸಿ ನಾಲೆಯಲ್ಲಿ ಪೀರ್ ಖಾನ್ ಎಂಬುವವರ ಶವ ಪತ್ತೆಯಾಗಿದೆ. ಪೀರ್ ಖಾನ್ ಮಂಡ್ಯ ಜಿಲ್ಲೆಯ ಹಾಲಹಳ್ಳಿ ಸ್ಲಂ ನಿವಾಸಿ ಎಂದು ತಿಳಿದುಬಂದಿದೆ.
ವೀಸಿ ನಾಲೆಯಲ್ಲಿ ಕಾರು ದುರಂತ ಪ್ರಕರಣ ಸಂಬಂಧ ಮೃತಪಟ್ಟವರ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ.