ಆತ ಫೈನಾನ್ಸ್ ಮಾಡಿಕೊಂಡು ಜೀವನ ಮಾಡ್ತಾ ಇದ್ದ. ಜೊತೆಗೆ ಒಂದಿಷ್ಟು ಜನರ ಬಳಿ ಸಾಲವನ್ನೂ ಮಾಡಿಕೊಂಡಿದ್ದ. ಅತ್ತ ಫೈನಾನ್ಸ್ ಕೊಟ್ಟ ಹಣ ವಾಪಸ್ ಬರಲಿಲ್ಲ. ಇತ್ತ ಸಾಲ ಕೊಟ್ಟ ಜನರ ಟಾರ್ಚರ್ ತಡೆಯಲಾಲಿಲ್ಲ. ಇದಕ್ಕಾಗಿ ಒಂದು ಉಪಾಯ ಹುಡುಕಿದ ಆತ ಕೊಲೆ ಎಂದು ಬಿಂಬಿಸಿ ಗೋವಾಕ್ಕೆ ತೆರಳಿ ಬಿಂದಾಸ್ ಆಗಿದ್ದ.
ಹೌದು, ಈ ಖತರ್ನಾಕ್ ಐಡಿಯಾ ಮಾಡಿದವನ ಹೆಸರು ಮನು. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಚೊಟ್ಟನಹಳ್ಳಿ ಗ್ರಾಮದವನು. ಸಾಲಗಾರರಿಂದ ತಪ್ಪಿಸಿಕೊಳ್ಳೋದಿಕ್ಕೆ ಮನು ಕಳೆದ ತಿಂಗಳು ಆಗಸ್ಟ್ 12 ರಂದು ಊರು ಬಿಟ್ಟಿದ್ದಾನೆ.
ಇದೇ ವೇಳೆ ಚೊಟ್ಟನಹಳ್ಳಿ ಗ್ರಾಮದಲ್ಲಿ ಗುಡ್ಡಹಬ್ಬ ಇತ್ತು. ಮನೆಗೆ ಬರೋದು 12 ಗಂಟೆಯಾಗಿದೆ. ಈ ವೇಳೆ ತಾನು ಹಾಕಿದ್ದ ವಿಗ್ ಗೆ ಕೋಳಿ ರಕ್ತ ಹಾಕಿ ತನ್ನ ಚಪ್ಪಲಿಗಳನ್ನು ಕಾಲುವೆ ಬಳಿ ಬಿಟ್ಟಿದ್ದಾನೆ. ತನ್ನ ಮೊಬೈಲ್ ಅನ್ನು ಮನೆಯಲ್ಲಿ ಚಚ್ಚಿ ಹಾಕಿದ್ದಾನೆ. ಬಳಿಕ ಕಾರೊಂದರಲ್ಲಿ ಬೆಂಗಳೂರಿಗೆ ಬಂದು ಅಲ್ಲಿಂದ ಗೋವಾಗೆ ತೆರಳಿದ್ದಾನೆ.
ಇದನ್ನೆಲ್ಲಾ ನೋಡಿದ ಪೋಷಕರು ಆತನನ್ನು ಯಾರೋ ಕೊಲೆ ಮಾಡಿದ್ದಾರೆ ಎಂದು ತಿಳಿದಿದ್ದಾರೆ. ಇದೇ ವೇಳೆ ಆಡಿಯೋ ಒಂದು ವೈರಲ್ ಆಗಿದೆ. ಎಂಟು ಲಕ್ಷ ಹಣವನ್ನು ಸುಪ್ರಿಯಾ ಎಂಬಾಕೆಗೆ ನೀಡಿದ್ದು. ಅದರ ಡಾಕ್ಯುಮೆಂಟ್ ಪಡೆದಿದ್ದ.
ಪೂರಕವಾದ ಡಾಕ್ಯುಮೆಂಟ್‍ನ್ನು ಸುಪ್ರಿಯಾಳಿಂದ ಮನು ಪಡೆದಿರುತ್ತಾನೆ. ಯಾರೋ ಒಬ್ಬ ಅವಳ ಡಾಕ್ಯುಮೆಂಟ್ ಕೊಡು ದುಡ್ಡು ಆಮೇಲೆ ಕೊಡ್ತಾಳೆ ಎಂದಿದ್ದಾನೆ. ನೀನು ದಾಖಲೆ ಕೊಡಲ್ಲ ಅಂದ್ರೆ ಸಲಗ ಸಿನಿಮಾ ರೀತಿಯಲ್ಲಿ ಕೊಲೆ ಆಗ್ತೀಯಾ ಎಂದು ಬೆದರಿಕೆ ಹಾಕಿದ್ದಾನೆ.
ಈ ಆಡಿಯೋ ಕೇಳಿಸಿಕೊಂಡ ಪೋಷಕರು ಮಗನ ಕೊಲೆ ಆಗಿದೆ ಎಂದು ಅರಕೆರೆ ಪೊಲೀಸ್ ಠಾಣೆಗೆ ದೂರನ್ನು ನೀಡ್ತಾರೆ. ದೂರನ್ನು ಆಧರಿಸಿ ತನಿಖೆ ಶುರು ಮಾಡಿದ ನಂತರ ಮನು ಜೀವಂತ ಇರುವುದು ಗೊತ್ತಾಗಿದೆ. ಆತನನ್ನು ಕರೆ ತಂದು ವಿಚಾರಿಸಿದಾಗ ಈ ನಾಟಕದ ಕಥೆ ಹೊರ ಬಿದ್ದಿದೆ.