
ಮಂಡ್ಯ: ಮಂಡ್ಯದಲ್ಲಿ ಪುಡಿರೌಡಿಗಳ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಯುವತಿಯ ವಿಚಾರವಾಗಿ ಅಪ್ರಾಪ್ತ ಬಾಲಕರು ಯುವಕನ ಮೇಲೆ ಮನಸೋ ಇಚ್ಛೆ ಹಲ್ಲೆ ನಡೆಸಿರುವ ಘಟನೆ ನಡೆದಿದೆ.
ಯುವತಿ ವಿಚಾರವಾಗಿ ಯುವಕರ ಎರಡು ಗುಂಫುಗಳ ನಡುವೆ ಗಲಾಟೆ ನಡೆದಿದ್ದು, ಅಪ್ರಾಪ್ತ ಹುಡುಗರ ಗುಂಪು ಐಐಟಿ ಓದುತ್ತಿದ್ದ 19 ವರ್ಷದ ಯುವಕನ ಮೇಲೆ ಹಲ್ಲೆ ನಡೆಸಿದ್ದಾರೆ. ಮೈಸೂರಿನ ಟಿ.ನರಸಿಪುರ ಮೂಲದ ಯುವಕನನ್ನು ಸ್ಮಶಾನಕ್ಕೆ ಕರೆದೊಯ್ದ 7-8 ಅಪ್ರಾಪ್ತ ಯುವಕರು, ಆತನನ್ನು ಅವಾಚ್ಯವಾಗಿ ನಿಂದಿಸಿ, ಮಚ್ಚು, ಲಾಂಗ್ ನಿಂದ ಹಲ್ಲೆ ನಡೆಸಿ ಕ್ರೌರ್ಯ ಮೆರೆದಿದ್ದಾರೆ.
ಯುವಕ ಬೇಡಿಕೊಂದರೂ ಹೊಡೆಯುವುದನ್ನು ನಿಲ್ಲಿಸಿಲ್ಲ. ಸಾಲದ್ದಕ್ಕೆ ಇದನ್ನು ವಿಡಿಯೋ ಮಾಡಿಕೊಂಡು ವೈರಲ್ ಮಾಡಿದ್ದಾರೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಪ್ರಕರಣ ದಾಖಲಿಸಿಕೊಂಡಿರುವ ಮಂಡ್ಯ ಪೂರ್ವ ಠಾಣೆ ಪೊಲೀಸರು ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ.