ಬೆಚ್ಚಿಬೀಳಿಸುವಂತಿದೆ ಮಕ್ಕಳೆದುರೇ ಮೃಗಾಲಯದಲ್ಲಿ ನಡೆದಿರುವ ಘಟನೆ 29-08-2021 11:22AM IST / No Comments / Posted In: Latest News, Live News, International ಅಮೆರಿಕದ ಪಶ್ಚಿಮ ಭಾಗದಲ್ಲಿನ ಗುಡ್ಡಗಾಡು ಪ್ರದೇಶಗಳ ರಾಜ್ಯ ಉತ್ಹಾಹದಲ್ಲಿ ಮೊಸಳೆಯೊಂದು ಮೃಗಾಲಯದ ಮೇಲ್ವಿಚಾರಕಿಯ ಮೇಲೆ ಎರಗಿ ಕೈಯನ್ನು ಕಚ್ಚಿಹಾಕಿದೆ. 8 ಅಡಿಗಳಷ್ಟು ಉದ್ದನೆಯ ‘ಡಾರ್ಥ ಗೇಟರ್’ ಎಂಬ ದೊಡ್ಡ ಗಾತ್ರದ ಮೊಸಳೆಯನ್ನು ಮಕ್ಕಳಿಗೆ ಮೇಲ್ವಿಚಾರಕಿಯೊಬ್ಬರು ತೋರಿಸಿ, ವಿವರಣೆ ನೀಡುತ್ತಿದ್ದರು. ಮಕ್ಕಳೆಲ್ಲರೂ ತಮ್ಮ ಸ್ನೇಹಿತನೊಬ್ಬನ ಜನ್ಮದಿನದ ಪಾರ್ಟಿಗಾಗಿ ಝೂ ವೀಕ್ಷಣೆಗೆ ಬಂದಿದ್ದರು. ಕಾರಿನ ಮೇಲೆ ಮೂತ್ರ ವಿಸರ್ಜಿಸಿದ ಶ್ವಾನ: ಪ್ರಶ್ನಿಸಿದವನಿಗೆ ಹಿಗ್ಗಾಮುಗ್ಗಾ ಥಳಿತ ಟ್ಯಾಂಕ್‍ನೊಳಗೆ ಸುಮ್ಮನೆ ಮಲಗಿದ್ದ ಮೊಸಳೆಯನ್ನು ಮಕ್ಕಳು ಗಮನಿಸುತ್ತಿದ್ದರು. ಆದರೆ, ಮೊಸಳೆಗೆ ಏನನ್ನಿಸಿತೊ ಏನೋ ಏಕಾಏಕಿಯಾಗಿ ಮೇಲ್ವಿಚಾರಕಿಯ ಕೈಗೆ ಬಾಯಿ ಹಾಕಿ ಬಿಗಿಯಾಗಿ ಕಚ್ಚಿಕೊಂಡಿದೆ. ಕೂಡಲೇ ಮಕ್ಕಳು ಚೀರಾಡುತ್ತಾ ಸ್ಥಳದಿಂದ ಕಾಲುಕಿತ್ತಿದ್ದಾರೆ. ಮೇಲ್ವಿಚಾರಕಿಯನ್ನು ಟ್ಯಾಂಕ್‍ನೊಳಗೆ ಎಳೆದುಕೊಂಡ ದೈತ್ಯ ಮೊಸಳೆಯು ಬಾಯಿಯನ್ನು ಬಿಡದೇ ಆಕೆಯನ್ನು ನೀರಿನೊಳಗೆ ಸುತ್ತಿಸಲು ಆರಂಭಿಸಿದೆ. ಇದು ಅದರ ಬೇಟೆಯ ರೀತಿ ಕೂಡ. ಕೂಡಲೇ ಮತ್ತೊಬ್ಬ ಝೂಕೀಪರ್ ಡಾನಿ ವೈಸ್‍ಮ್ಯಾನ್ ಎಂಬಾತ ಟ್ಯಾಂಕ್‍ಗೆ ಹಾರಿ ಮೊಸಳೆಯ ಮೇಲೇರಿ ಕೂತಿದ್ದಾರೆ. ತಮ್ಮ ಕೈಗಳನ್ನು ಕಚ್ಚುವಂತೆ ಮುಂದೆ ಬಂದಾಗ ಮೊಸಳೆ ಬಾಯಿ ಅಗಲಿಸಿದೆ. ಕೂಡಲೇ ಮೇಲ್ವಿಚಾರಕಿಯು ತನ್ನ ಕೈಗಳನ್ನು ಎಳೆದುಕೊಂಡು ಟ್ಯಾಂಕ್‍ನಿಂದ ಹೊರಗೆ ಜಿಗಿದು ಪಾರಾಗಿದ್ದಾರೆ. ಚಾಲಾಕಿ ಡಾನಿ ಕೂಡ ಕೈಗಳನ್ನು ಮೇಲಕ್ಕೆ ಎತ್ತಿಕೊಂಡು ಟ್ಯಾಂಕ್ ಹೊರಕ್ಕೆ ಜಂಪ್ ಮಾಡಿ ಮೊಸಳೆಗೆ ಚಳ್ಳೆಹಣ್ಣು ತಿನ್ನಿಸಿದ್ದಾರೆ. (Disclaimer: This footage might be sensitive for some viewers)