ಜನರು ಸಾಮಾನ್ಯವಾಗಿ ಕ್ಷೌರ ಅಥವಾ ಕಿವಿಯಿಂದ ಮೊಳಕೆಯೊಡೆಯುವ ಕೂದಲನ್ನು ಟ್ರಿಮ್ ಮಾಡುತ್ತಾರೆ. ಆದರೆ ಇದರಲ್ಲಿಯೂ ದಾಖಲೆ ಮಾಡಬಹುದು ಎಂದು ಹಲವರಿಗೆ ತಿಳಿದಿಲ್ಲ. ಇಂಥ ಉದ್ದನೆಯ ಕೂದಲುಳ್ಳ ವ್ಯಕ್ತಿಯೊಬ್ಬರ ಹೆಸರು ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ನಲ್ಲಿ ಸೇರಿದೆ. “ಉದ್ದನೆಯ ಕಿವಿ ಕೂದಲು ದಾಖಲೆ” ಇದಾಗಿದೆ.
ಆಂಟೋನಿ ವಿಕ್ಟರ್ ಎಂಬ ಹೆಸರಿನ ನಿವೃತ್ತ ಶಿಕ್ಷಕ ಈ ದಾಖಲೆ ಮಾಡಿದ್ದಾರೆ. ಕಿವಿಯ ಮೇಲೆ ಸುಮಾರು 7 ಇಂಚುಗಳಷ್ಟು ಅಳತೆಯ ಕೂದಲು ಬೆಳೆದಿದೆ. ಕುತೂಹಲಕಾರಿ ಸಂಗತಿಯೆಂದರೆ, ಆಂಟನಿ 2007 ರಲ್ಲಿ ಈ ದಾಖಲೆ ಮಾಡಿದ್ದರು. ಈಗ ತಮ್ಮ ದಾಖಲೆಯನ್ನು ತಾವೇ ಮುರಿದಿದ್ದಾರೆ. ಶಾಲೆಯಲ್ಲಿ ಕೂಡ ಇವರು ‘ಕಿವಿ ಕೂದಲಿನ ಶಿಕ್ಷಕ’ ಎಂದೇ ಪ್ರಸಿದ್ಧರಾಗಿದ್ದರು.
2003 ರಲ್ಲಿ, ರಾಧಾಕಾಂತ್ ಬಾಜ್ಪೇಯ್ ಎಂಬ ಉತ್ತರ ಪ್ರದೇಶದ ಕಿರಾಣಿ ವ್ಯಾಪಾರಿ 13.2 ಸೆಂ.ಮೀ ಉದ್ದದ ಕಿವಿಯ ಕೂದಲು ಬಿಟ್ಟು ದಾಖಲೆ ಮಾಡಿದ್ದರು. ನಂತರದಿಂದ ಈ ದಾಖಲೆ ಶಿಕ್ಷಕನ ಹೆಸರಿನಲ್ಲಿ ಇದೆ.