alex Certify ಪ್ರೇಯಸಿಗಾಗಿ ಫಾರ್ಮುಲಾ ಒನ್​ ಟಿಕೆಟ್​ಗೆ ಹುಡುಕಾಡಿದ ಕ್ಯಾನ್ಸರ್​ ಪೀಡಿತ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರೇಯಸಿಗಾಗಿ ಫಾರ್ಮುಲಾ ಒನ್​ ಟಿಕೆಟ್​ಗೆ ಹುಡುಕಾಡಿದ ಕ್ಯಾನ್ಸರ್​ ಪೀಡಿತ

ಇದೊಂದು ಹೃದಯ ಸ್ಪರ್ಶಿ ಕಥೆ. ಒಬ್ಬ ವ್ಯಕ್ತಿ ತನ್ನ ಕತೆಯನ್ನು ಹೇಳಲು ರೆಡ್ಡಿಟ್​ ವೇದಿಕೆ ಬಳಸಿಕೊಂಡಿದ್ದು, ಆತನ ಬಯಕೆ ಈಡೇರಿಸಲು ರೆಡ್ಡಿಟ್​ ಬಳಕೆದಾರರು ಕೈಜೋಡಿಸಿದ್ದಾರೆ.

ಫಾರ್ಮುಲಾ ಒನ್​ ನೋಡುವ ತವಕದಲ್ಲಿರುವ ಪ್ರೇಯಸಿಗಾಗಿ ಟಿಕೆಟ್​ ಕೊಂಡುಕೊಳ್ಳಲು ಆತ ಹೋರಾಟ ನಡೆಸಿದ್ದು, ಆ ಪ್ರಯತ್ನದ ಕಥೆ ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆದಿದೆ.

ನನ್ನ ಪ್ರೇಯಸಿ ಫಾರ್ಮುಲಾ ಒನ್​ ಎಂದರೆ ಜೀವ ಬಿಡುವಷ್ಟು ಪ್ರೀತಿಸುತ್ತಾಳೆ. ಆಕೆಯನ್ನು ನಾನು ಫಾರ್ಮುಲಾ ಒನ್​ಗೆ ಕರೆದೊಯ್ಯಬೇಕೆಂಬ ಒಕ್ಕಣೆಯೊಂದಿಗೆ ಆತನ ಕೋರಿಕೆ ಪ್ರಾರಂಭವಾಗುತ್ತದೆ.

ಇಲ್ಲೊಂದು ಟ್ವಿಸ್ಟ್​ ಸಹ ಇದೆ. ತನಗೆ ವರ್ಷದ ಹಿಂದೆ ಮೆದುಳಿನ ಕ್ಯಾನ್ಸರ್​ ಕಂಡುಬಂದಿತು. ನನ್ನ ದಿನಗಳು ಮುಗಿಯುವ ಮೊದಲು ಅವಳಿಗೆ ಏನಾದರೂ ದೊಡ್ಡದನ್ನು ಕೊಡಬೇಕೆಂದು ಬಯಕೆಯಾಗಿದೆ. ನನ್ನ ಸ್ಥಿತಿ ಹದಗೆಡುತ್ತಿದೆ.- ಅದು ಅವಳಿಗೆ ತಿಳಿದಿಲ್ಲ. ಏಕೆಂದರೆ ನಾನು ಅವಳ ಖುಷಿ ಹಾಳು ಮಾಡಲು ಬಯಸುವುದಿಲ್ಲ ಎಂದು ಬರೆದುಕೊಂಡಿದ್ದಾರೆ.

ಫಾರ್ಮುಲಾ ಒನ್​ ಟಿಕೆಟ್​ಗಳು ದುಬಾರಿಯಾಗಿದೆ ಮತ್ತು ಅನಾರೋಗ್ಯದಿಂದಾಗಿ ಸಾಕಷ್ಟು ಆದಾಯವನ್ನು ಕಳೆದುಕೊಂಡಿರುವೆ. ಹೀಗಾಗಿ ಕೈಗೆಟಕುವ ದರದಲ್ಲಿ ಟಿಕೆಟ್​ ಎಲ್ಲಿ ಸಿಗುತ್ತದೆ ಎಂದು ಯಾರಿಗಾದರೂ ತಿಳಿದಿದೆಯೇ? ಎಂದು ಕೇಳಿದ್ದಾರೆ.

ಪೋಸ್ಟ್​ ವೈರಲ್​ ಆಗಿದ್ದು ನೆಟ್ಟಿಗರಿಂದ ಸಾವಿರಾರು ಪ್ರತಿಕ್ರಿಯೆಗಳು ಬಂದಿವೆ. ಅನೇಕರು ಭಾವುಕರಾಗಿ ಕಾಮೆಂಟ್​ ಮಾಡಿದ್ದರೆ ಮತ್ತೆ ಕೆಲವರು ಆತನ ಪ್ರಯತ್ನವನ್ನು ಕೊಂಡಾಡಿದ್ದಾರೆ. ಇನ್ನು ಕೆಲವರು ಮಾಹಿತಿಯನ್ನೂ ಹಂಚಿಕೊಂಡಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...