
ಅಲ್ಜೈಮರ್ಸ್ ಪೀಡಿತರಾದ ವ್ಯಕ್ತಿಯೊಬ್ಬರು ತಾವು ಮದುವೆಯಾಗಿರುವುದನ್ನೇ ಮರೆತು ತನ್ನ ಮಡದಿಗೆ ’ಮದುವೆಯಾಗುವೆಯಾ?’ ಎಂದು ಮತ್ತೊಮ್ಮೆ ಪ್ರಪೋಸ್ ಮಾಡಿದ್ದಾರೆ.
ಟಿವಿಯಲ್ಲಿ ಮದುವೆ ಕಾರ್ಯಕ್ರಮವೊಂದನ್ನು ವೀಕ್ಷಿಸುವ ವೇಳೆ, ಪೀಟರ್ ಮಾರ್ಷಲ್ ಹೆಸರಿನ ಈತ ತಾನು ಅದಾಗಲೇ ಮದುವೆಯಾಗಿದ್ದೇನೆ ಎಂಬುದನ್ನೇ ಮರೆತು ಮಡದಿ ಲೀಸಾಗೆ ತನ್ನನ್ನು ಮದುವೆಯಾಗಲು ಕೋರಿದ್ದಾರೆ. ತಾನು ಮದುವೆಯಾಗಿರುವುದನ್ನೇ ಮರೆತಿರುವ ಪೀಟರ್, ಆಗಾಗ ಹೀಗೆ ಮಾಡುವುದರಿಂದ ಇಬ್ಬರ ನಡುವಿನ ರೊಮ್ಯಾಂಟಿಕ್ ಚಾರ್ಮ್ ಇನ್ನಷ್ಟು ಹೆಚ್ಚಾಗಿದೆ.
ಆಸ್ಪತ್ರೆಯಲ್ಲಿದ್ದ ಮಹಿಳಾ ರೋಗಿ ನಾಪತ್ತೆಯಾದ ನಿಗೂಢ ರಹಸ್ಯ ಭೇದಿಸಿದ ಪೊಲೀಸರು
ಪೀಟರ್ ಹಾಗೂ ಅವರ ಮಡದಿ ಲೀಸಾ ಕಳೆದ 12 ವರ್ಷಗಳಿಂದ ವಿವಾಹ ಬಂಧನದಲ್ಲಿದ್ದಾರೆ. ಅಲ್ಜೈಮರ್‌ನಿಂದ ತಮ್ಮ ನೆನಪಿನ ಶಕ್ತಿಯನ್ನೇ ಕಳೆದುಕೊಂಡಿದ್ದಾರೆ ಪೀಟರ್. “ನಾನು ಆತನ ಮಡದಿ ಎಂದು ಆತನಿಗೆ ಗೊತ್ತಿಲ್ಲ. ನಾನು ಆತನ ಮೆಚ್ಚಿನ ವ್ಯಕ್ತಿ ಅಷ್ಟೇ” ಎನ್ನುತ್ತಾರೆ ಲೀಸಾ.