
ನಥಿಂಗ್ ಟೆಕ್ನಾಲಜಿ ಲಿಮಿಟೆಡ್‌ನ ಸಂಸ್ಥಾಪಕರಾಗಿರುವ ಕಾರ್ಲ್ ಪೀ ಅವರ ಪೋಸ್ಟ್‌ನಲ್ಲಿ ಕಾಮೆಂಟ್ ಹಾಕಿದ ಇಬ್ಬರು ನೆಟ್ಟಿಗರು ಇದೀಗ ತಲಾ ಒಂದು “ಸ್ಮಾರ್ಟ್‌ಫೋನ್” ಸ್ವೀಕರಿಸಲಿರುವ ಕುತೂಹಲದ ಘಟನೆ ನಡೆದಿದೆ.
ನಥಿಂಗ್ ಟೆಕ್ನಾಲಜಿ ಲಿಮಿಟೆಡ್‌ನ ಸಂಸ್ಥಾಪಕರು ಹಾಗೂ ಸಿಇಒ ಆಗಿರುವ ಕಾರ್ಲ್ ಪೀ ಅವರು ಈ ಹಿಂದೆ ನೀಡಿದ್ದ ಹೇಳಿಕೆಯಂತೆ ಇವರ ಪೋಸ್ಟ್ಗೆ ಕಮೆಂಟ್ ಮಾಡುವ ಮೂಲಕ ಇಬ್ಬರು ಬಳಕೆದಾರರು ನಥಿಂಗ್ ಕಂಪೆನಿಯ ಫೋನ್ಗಳನ್ನು ಸ್ವೀಕರಿಸಲಿದ್ದಾರೆ.
ಡಿಸೆಂಬರ್ 21 ರಂದು, ಕಾರ್ಲ್ ಪೀ ಅವರು ಸ್ಪರ್ಧೆ ಏರ್ಪಡಿಸಿದ್ದರು. ತಮ್ಮ ಟ್ವೀಟ್‌ಗೆ ಕಾಮೆಂಟ್ ಹಾಕಲು ಹೇಳಿದ್ದರು. ಕಮೆಂಟ್ ಇಷ್ಟವಾದರೆ ಮುಂದಿನ 24 ಗಂಟೆಗಳಲ್ಲಿ ವಿಜೇತರನ್ನು ಆಯ್ಕೆ ಮಾಡಲಾಗುವುದು ಎಂದು ಹೇಳಿದ್ದರು. ಅದರಂತೆ ಈಗ ಬಹುಮಾನ ನೀಡಲಿದ್ದಾರೆ. ಅದರಲ್ಲಿ ಒಬ್ಬರು ಜೋಯ್. ಅವರು ಮಾಡಿದ್ದ ಕಮೆಂಟ್ ಕೇವಲ ಓಕೆ ಎಂದು!
ಅಂದಹಾಗೆ, ಭಾರತದಲ್ಲಿ ನಥಿಂಗ್ ಫೋನ್ 1 ನ ಬೆಲೆ 32,999 ರೂ.ರಿಂದ ಪ್ರಾರಂಭವಾಗುತ್ತವೆ (8GB RAM ಮತ್ತು 128GB ) ಆದರೆ ಫೋನ್ 1 ಚಾರ್ಜರ್ ಅಥವಾ ಕೇಸ್‌ನೊಂದಿಗೆ ಬರುವುದಿಲ್ಲ.