
ವ್ಯಕ್ತಿಯೊಬ್ಬರಿಗೆ ಕೊಡಲಾದ ಉಪಹಾರದ ಚಿತ್ರವೊಂದು ವೈರಲ್ ಆಗಿದ್ದು, ನೆಟ್ಟಿಗರಿಂದ ಮಿಶ್ರ ಪ್ರಕ್ರಿಯೆಗಳು ಬಂದಿವೆ.
ಉಪಹಾರಕ್ಕೆಂದು ಸ್ಯಾಂಡ್‌ವಿಚ್ ಖರೀದಿ ಮಾಡಲು ಮುಂದಾದ ವ್ಯಕ್ತಿ ಅದರ ದುಡ್ಡನ್ನು ನಾಣ್ಯಗಳಲ್ಲಿ ಪಾವತಿ ಮಾಡಿದ ಕಾರಣ ಆತನಿಗೆ ಚೂರು ಚೂರಾಗಿ ಕತ್ತರಿಸಲಾದ ಸ್ಯಾಂಡ್‌ವಿಚ್ ನೀಡಲಾಗಿದೆ. 10 ಪೆನ್ನಿ ನಾಣ್ಯಗಳಲ್ಲಿ ಸ್ಯಾಂಡ್‌ವಿಚ್‌ಗೆ ಪಾವತಿ ಮಾಡಿದ ಈ ವ್ಯಕ್ತಿಗೆ 16 ಚೂರುಗಳಾಗಿ ಕತ್ತರಿಸಲಾದ ಸ್ಯಾಂಡ್‌ವಿಚ್ ನೀಡಲಾಗಿದೆ.
“ಅಬ್ಬಾ! ಅದನ್ನು ಸೇವಿಸುವ ವೇಳೆ ಅಗಿಯುವ ಅಗತ್ಯವೇ ಬೀಳುವುದಿಲ್ಲ!” ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ. “ಇಷ್ಟು ನಾಜೂಕಾಗಿ ಕಟ್ ಮಾಡಿದ್ದಕ್ಕೆ ನಾನು ಇನ್ನಷ್ಟು ಹೆಚ್ಚು ಪಾವತಿ ಮಾಡುತ್ತಿದ್ದೆ,” ಎಂದು ಮತ್ತೊಬ್ಬ ನೆಟ್ಟಿಗ ಕಾಮೆಂಟ್ ಮಾಡಿದ್ದಾರೆ.