ಭಾರತದಾದ್ಯಂತ ಐಷಾರಾಮಿ ಹೋಟೆಲ್‌ಗಳನ್ನು ವಂಚಿಸುವುದನ್ನೇ ಕಾಯಕವನ್ನಾಗಿ ಮಾಡಿಕೊಂಡಿದ್ದ ಬಿಮ್ಸೆಂಟ್ ಜಾನ್ ಎಂಬಾತ ತಮಿಳುನಾಡಿನಲ್ಲಿ ಸಿಕ್ಕಿಬಿದ್ದ ನಂತರ ಆತನನ್ನು ಬಂಧಿಸಲಾಗಿದೆ. ಡಿ.7ರಂದು ತೂತುಕುಡಿಯ ಖಾಸಗಿ ಹೋಟೆಲ್‌ಗೆ ಬಂದಿದ್ದು, ಮುಂಗಡ ಮೊತ್ತವನ್ನು ಡಿಸೆಂಬರ್ 9 ರೊಳಗೆ ಪಾವತಿಸಿ ಡಿಸೆಂಬರ್ 12 ರವರೆಗೆ ಇರುವುದಾಗಿ ಮ್ಯಾನೇಜರ್‌ಗೆ ಹೇಳಿದ್ದ.
ತನ್ನ ವಾಸ್ತವ್ಯದ ಸಮಯದಲ್ಲಿ ಆತ, ಕನ್‌ಮ್ಯಾನ್ ಹೋಟೆಲ್‌ನಲ್ಲಿ ಆಹಾರ ಸೇವಿಸಿದ್ದು, ಇದಕ್ಕಾಗಿ 39,298 ರೂ. ಬಿಲ್ ಮಾಡಿದ್ದ, ಆದರೆ ಅದನ್ನು ಪಾವತಿಸದೆ ತೆರಳಿದ್ದು, ಹೋಟೆಲ್ ಮ್ಯಾನೇಜರ್ ನಿತಿನ್, ಸ್ಥಳೀಯ ಪೊಲೀಸರಿಗೆ ಘಟನೆಯನ್ನು ವರದಿ ಮಾಡಿದ್ದರು, ಬಳಿಕ ಜಾನ್ ನನ್ನು ಶೀಘ್ರವಾಗಿ ಬಂಧಿಸಲಾಗಿದ್ದು, ಈತ 1996 ರಿಂದಲೂ ಕೊಲ್ಲಂ, ಥಾಣೆ ಮತ್ತು ದೆಹಲಿಯ ಹಲವಾರು ಹೋಟೆಲ್‌ಗಳಿಗೆ ವಂಚಿಸಿದ್ದನ್ನು ತನಿಖಾಧಿಕಾರಿಗಳು ಪತ್ತೆ ಹಚ್ಚಿದ್ದಾರೆ.
ʼಮನಿ ಕಂಟ್ರೋಲ್ʼ ವರದಿ ಮಾಡಿದಂತೆ, ಜಾನ್ ವಿರುದ್ಧ ಭಾರತ ಮತ್ತು ವಿದೇಶದ ವಿವಿಧ ಪೊಲೀಸ್ ಠಾಣೆಗಳಲ್ಲಿ 49 ಪ್ರಕರಣಗಳು ದಾಖಲಾಗಿದ್ದು, ವಂಚನೆಯ ಸುದೀರ್ಘ ಇತಿಹಾಸವಿದೆ. ಈ ಹಿಂದೆಯೂ ಇದೇ ಅಪರಾಧಕ್ಕಾಗಿ ಐದು ವರ್ಷ ಜೈಲು ವಾಸ ಅನುಭವಿಸಿದ್ದ ಎನ್ನಲಾಗಿದೆ. ಮಣಿಪಾಲದ ಕೌಂಟಿ ಇನ್ ಹೋಟೆಲ್‌ಗೆ ವಂಚಿಸಿದ ಆರೋಪದ ಮೇಲೆ ಇತ್ತೀಚೆಗೆ ಬಂಧನಕ್ಕೊಳಗಾದ ಜಾನ್‌ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, 14 ದಿನಗಳ ಕಾಲ ಆತನನ್ನು ನ್ಯಾಯಾಂಗ ಬಂಧನದಲ್ಲಿಡಲು ನ್ಯಾಯಾಧೀಶರು ಆದೇಶಿಸಿದ್ದಾರೆ.
ಬಿಮ್ಸೆಂಟ್ ಜಾನ್ ತಮಿಳುನಾಡಿನಿಂದ ಬಂದು ಕೌಂಟಿ ಇನ್ ನಲ್ಲಿ ಕೊಠಡಿ ತೆಗೆದುಕೊಂಡಿದ್ದ. ಆತನ ವಿರುದ್ಧ ದೆಹಲಿ, ಮಹಾರಾಷ್ಟ್ರ, ಕೇರಳ ಮತ್ತಿತರ ಕಡೆ ಪ್ರಕರಣಗಳು ದಾಖಲಾಗಿರುವುದು ವಿಚಾರಣೆ ವೇಳೆ ತಿಳಿದು ಬಂದಿದೆ. ಸ್ಟಾರ್ ಹೊಟೇಲ್‌ಗಳಲ್ಲಿ ಉಳಿದುಕೊಂಡು ಅವರನ್ನು ವಂಚಿಸುತ್ತಿದ್ದ. 1996ರಿಂದ ಈ ರೀತಿ ಮಾಡುತ್ತಿದ್ದು, ಅವನ ವಿರುದ್ಧ 49 ಪ್ರಕರಣಗಳು ದಾಖಲಾಗಿವೆ ಎಂದು ಹೇಳಲಾಗಿದೆ.