
ಜಗತ್ತಿನಲ್ಲಿ ಹಲವಾರು ವಿಚಿತ್ರ ಉದ್ಯೋಗಗಳಿವೆ. ಈಗ ಅಂಥದ್ದೇ ಒಂದು ಉದ್ಯೋಗ ಬೆಳಕಿಗೆ ಬಂದಿದೆ. ಅದೇ ಡಾಗ್ ವಾಕರ್. ನಾಯಿಯನ್ನು ವಾಕಿಂಗ್ಗೆ ಕರೆದುಕೊಂಡು ಹೋಗಿ ನೀವು ಆದಾಯ ಗಳಿಸಬಹುದು. ಇದರಲ್ಲಿ ಏನು ಮಹಾ ಆದಾಯ ಬರುತ್ತದೆ ಎಂದುಕೊಳ್ಳಬೇಡಿ. ಇಲ್ಲೊಬ್ಬ ವ್ಯಕ್ತಿ ಡಾಗ್ ವಾಕರ್ ಆಗಿ ಸುಮಾರು 1 ಕೋಟಿ ಗಳಿಸಿ ಎಲ್ಲರನ್ನೂ ಬೆಚ್ಚಿ ಬೀಳಿಸಿದ್ದಾನೆ!
ಅಮೆರಿಕದ ಬ್ರೂಕ್ಲಿನ್ ನಿವಾಸಿ ಮೈಕೆಲ್ ಜೋಸೆಫ್ ಈ ಹಿಂದೆ ಪೂರ್ಣಾವಧಿ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದರು. ನ್ಯೂಯಾರ್ಕ್ ಪೋಸ್ಟ್ ಪ್ರಕಾರ, ಜೋಸೆಫ್ ವರ್ಷಕ್ಕೆ 30 ಲಕ್ಷ ಸಂಪಾದಿಸುತ್ತಿದ್ದರು. ನಂತರ ಅದನ್ನು 1 ಕೋಟಿ ರೂ.ಗೆ ಏರಿಸಿಕೊಳ್ಳುವ ಇಷ್ಟವಾಯಿತು. ಅದಕ್ಕಾಗಿ ಡಾಗ್ ವಾಕರ್ ಆದರು.
ಅವರು ಉತ್ತಮ ಹಣವನ್ನು ಗಳಿಸಿದ್ದು ಮಾತ್ರವಲ್ಲದೆ, ನ್ಯೂಜೆರ್ಸಿಯ ಮಿಡಲ್‌ಟೌನ್‌ನಲ್ಲಿ ಮನೆ, ಹೊಸ ಕಾರನ್ನು ಖರೀದಿಸಿದ್ದಾರೆ. 34 ವರ್ಷದ ಅವರು ಇತ್ತೀಚೆಗೆ ತಮ್ಮ ಕುಟುಂಬದೊಂದಿಗೆ ಡಿಸ್ನಿಲ್ಯಾಂಡ್‌ಗೆ ಭೇಟಿ ನೀಡಿದ್ದಾಗ ಸುದ್ದಿವಾಹಿನಿಗೆ ಸಂದರ್ಶನ ನೀಡಿದರು.
ಜೋಸೆಫ್ ಅವರು ಖಾಸಗಿ ಶಾಲೆಯಲ್ಲಿ ವಿಶೇಷ ಅಗತ್ಯವಿರುವ ಶಿಕ್ಷಕರಾಗಿ ತಮ್ಮ ವಾರ್ಷಿಕ ಆದಾಯದ ಮೇಲೆ ಸ್ವಲ್ಪ ಹೆಚ್ಚುವರಿ ಗಳಿಸಲು 2019 ರ ಆರಂಭದಲ್ಲಿ ನಾಯಿಗಳನ್ನು ವಾಕಿಂಗ್ಗೆ ಕರೆದುಕೊಂಡು ಹೋಗಲು ಪ್ರಾರಂಭಿಸಿದರು. ನಾಯಿಯ ಮೇಲೆ ಅವರಿಗೆ ಇರುವ ಪ್ರೀತಿಯನ್ನು ನೋಡಿ ಕೆಲವರು ತಮ್ಮ ನಾಯಿಯನ್ನು ವಾಕಿಂಗ್ಗೆ ಕರೆದುಕೊಂಡು ಹೋಗುತ್ತೀರಾ ಎಂದು ಪ್ರಶ್ನಿಸಿದರು. ನಂತರ ಇದನ್ನೆ ಏಕೆ ಉದ್ಯೋಗ ಮಾಡಿಕೊಳ್ಳಬಾರದು ಎಂದು ಬಯಸಿದ ಜೋಸೆಫ್ ಈಗ ಪೂರ್ಣ ಪ್ರಮಾಣದ ಡಾಗ್ ವಾಕರ್ ಆಗಿದ್ದಾರೆ.