ಉತ್ತರ ಕೊರಿಯಾದಲ್ಲಿ ಟಿವಿ ಖರೀದಿಸುವುದು, ಕೂದಲು ಕತ್ತರಿಸುವುದು ಸೇರಿದಂತೆ ಹಲವು ವಿಚಾರಗಳಲ್ಲಿ ಕಠಿಣ ನಿಯಮಗಳಿವೆ ಎಂದು ಅಲ್ಲಿಂದ ತಪ್ಪಿಸಿಕೊಂಡು ಬಂದ ತಿಮೋತಿ ಚೋ ಹೇಳಿದ್ದಾರೆ. ಉತ್ತರ ಕೊರಿಯಾದಲ್ಲಿ ಟಿವಿ ಖರೀದಿಸಿದರೆ, ಸರ್ಕಾರಿ ಅಧಿಕಾರಿಗಳು ಮನೆಗೆ ಬಂದು, ಸರ್ಕಾರಿ ವಾಹಿನಿಗಳನ್ನು ಮಾತ್ರ ನೋಡುವಂತೆ ಆಂಟೆನಾಗಳನ್ನು ಸರಿಪಡಿಸುತ್ತಾರೆ. ಕಿಮ್ ಕುಟುಂಬದ ಪ್ರಚಾರಗಳನ್ನು ಬಿಟ್ಟು ಬೇರೆ ಯಾವುದೇ ಕಾರ್ಯಕ್ರಮಗಳನ್ನು ನೋಡುವಂತಿಲ್ಲ.
ಶಾಲಾ ಮಕ್ಕಳೂ ಸಹ ಸರ್ಕಾರದ ನಿಯಮಗಳ ಪ್ರಕಾರವೇ ಕೂದಲು ಕತ್ತರಿಸಬೇಕು. ನಿಯಮಗಳನ್ನು ಉಲ್ಲಂಘಿಸಿದರೆ, ಪೋಷಕರನ್ನು ಪೊಲೀಸ್ ಠಾಣೆಗೆ ಕರೆಸಿ ವಿಚಾರಣೆ ಮಾಡಲಾಗುತ್ತದೆ. ಕಿಮ್ ಇಲ್-ಸಂಗ್ ಅವರನ್ನು “ಶಾಶ್ವತ ನಾಯಕ” ಎಂದು ಪೂಜಿಸಲಾಗುತ್ತದೆ. ಕಿಮ್ ಜಾಂಗ್-ಇಲ್ ಅವರನ್ನು “ದೇವರ ಮಗ” ಎಂದು ಕರೆಯಲಾಗುತ್ತದೆ. ಪ್ರತಿ ರಾಷ್ಟ್ರೀಯ ರಜಾದಿನದಂದು, ಕಿಮ್ ಕುಟುಂಬದ ಪ್ರತಿಮೆಗಳಿಗೆ ನಮಸ್ಕರಿಸಬೇಕು.
ಉತ್ತರ ಕೊರಿಯಾದಿಂದ ತಪ್ಪಿಸಿಕೊಳ್ಳುವುದು ತುಂಬಾ ಕಷ್ಟ. 1950 ರಿಂದ ಇಲ್ಲಿಯವರೆಗೆ ಸುಮಾರು 30,000 ಜನರು ಮಾತ್ರ ದೇಶದಿಂದ ತಪ್ಪಿಸಿಕೊಂಡಿದ್ದಾರೆ. ಅವರು ಸಿಯೋಲ್, ಚೀನಾ, ಯುರೋಪ್ ಅಥವಾ ಅಮೆರಿಕದಲ್ಲಿ ನೆಲೆಸಿದ್ದಾರೆ.