alex Certify 16ನೇ ವಯಸ್ಸಿಗೆ ಶಾಲೆಗೆ ಗುಡ್​ ಬೈ..! ಆದರೂ ಛಲ ಬಿಡದ ಈ ವ್ಯಕ್ತಿ ಈಗ ಶತ ಕೋಟ್ಯಾಧಿಪತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

16ನೇ ವಯಸ್ಸಿಗೆ ಶಾಲೆಗೆ ಗುಡ್​ ಬೈ..! ಆದರೂ ಛಲ ಬಿಡದ ಈ ವ್ಯಕ್ತಿ ಈಗ ಶತ ಕೋಟ್ಯಾಧಿಪತಿ

ಒಳ್ಳೆಯ ವಿದ್ಯಾಭ್ಯಾಸ ನಮ್ಮನ್ನು ಜೀವನದಲ್ಲಿ ಉತ್ತಮ ಸ್ಥಾನಕ್ಕೆ ಕೊಂಡೊಯ್ಯುತ್ತೆ ಎಂದು ಹಿರಿಯರು ಹೇಳುತ್ತಲೇ ಇರ್ತಾರೆ. ಈ ಮಾತು ನೂರಕ್ಕೆ ನೂರರಷ್ಟು ಸತ್ಯ ಕೂಡ ಹೌದು. ಆದರೆ 16ನೇ ವಯಸ್ಸಿನಲ್ಲಿಯೇ ಶಾಲೆಯಿಂದ ಹೊರಗೆ ಹಾಕಲ್ಪಟ್ಟ ಪರಿಣಾಮ ಕನಿಷ್ಟ ವಿದ್ಯಾರ್ಹತೆಯನ್ನೂ ಹೊಂದಿರದ ವ್ಯಕ್ತಿಯೊಬ್ಬ ಇದೀಗ ಕೋಟ್ಯಾಧಿಪತಿಯಾಗಿದ್ದಾನೆ ಎಂದರೆ ನೀವು ನಂಬಲೇಬೇಕು..!

ಬ್ರಿಟನ್​​ನ ಯಾರ್ಕ್​ಶೈರ್​ ನಿವಾಸಿಯಾದ ಸ್ಟೀವ್​ ಪಾರ್ಕಿನ್​, 1992ರಲ್ಲಿ ಶಾಲೆಯನ್ನು ತ್ಯಜಿಸಿದರು. ಇದಾದ ಬಳಿಕ ಹೆವಿ ಗೂಡ್ಸ್​​ ಪರವಾನಿಗೆ ಪಡೆದ ಸ್ಟೀವ್​​ ಜೀವನೋಪಾಯಕ್ಕೆ ವಾಹನ ಚಲಾಯಿಸಲು ಆರಂಭಿಸಿದ್ರು. ಇಂದು ಸ್ಟೀವ್​ ಮಾರ್ಕಿನ್​ ತಮ್ಮದೇ ಲಾಜಿಸ್ಟಿಕ್​ ಕಂಪನಿ ಹೊಂದಿದ್ದು ಇದರ ಮೌಲ್ಯ 450 ಕೋಟಿ ರೂಪಾಯಿ ಆಗಿದೆ.

ಯೋಧರಿಂದ ಮಹಿಳೆಯರಿಗೆ ಕಿರಿಕಿರಿ: ಟಿಎಂಸಿ ಶಾಸಕನ ವಿವಾದಾತ್ಮಕ ಹೇಳಿಕೆ

ಪಾರ್ಕಿನ್​ ಪ್ರಸ್ತುತ ಯಾರ್ಕ್​ಶೈರ್​ನ ಶ್ರೀಮಂತರ ಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದ್ದಾರೆ. ಕೋವಿಡ್​ 19ನಿಂದ ಅನೇಕರ ಉದ್ಯಮಕ್ಕೆ ಹೊಡೆತ ಬಿದ್ದಿದೆ. ಆದರೂ ಸಹ ಸ್ಟೀವ್​ ಪಾರ್ಕಿನ್​​​ರ ಕ್ಲಿಪ್ಪರ್​​ ಕಂಪನಿ ಮಾತ್ರ ಈ ಸಂಕಷ್ಟದ ಸಮಯದಲ್ಲಿಯೂ ಲಾಭವನ್ನು ಕಂಡಿದೆ.

ಕಂಪನಿಯು ತನ್ನ ವಹಿವಾಟನಲ್ಲಿ ಶೇಕಡಾ 39.1 ಪ್ರತಿಶತ ಏರಿಕೆ ಕಂಡಿದೆ. ಈ ಕಂಪನಿಯಲ್ಲಿ ಒಟ್ಟು 10 ಸಾವಿರ ಉದ್ಯೋಗಿಗಳು ಕೆಲಸ ಮಾಡುತ್ತಿದ್ದಾರೆ.

ಕ್ಲಿಪ್ಪರ್​​ ಭವಿಷ್ಯದ ಬಗ್ಗೆ ಸಾಕಷ್ಟು ನಿರೀಕ್ಷೆ ಹೊಂದಿದ್ದ ನನಗೆ ಸಾಕಷ್ಟು ಆತ್ಮವಿಶ್ವಾಸ ಕೂಡ ಇತ್ತು. ಸಂಕಷ್ಟದ ಸಮಯದಲ್ಲಿಯೂ ಅನೇಕ ಸವಾಲುಗಳನ್ನು ಪರಿಣಾಮಕಾರಿಯಾಗಿ ಎದುರಿಸುವ ಮೂಲಕ ನಮ್ಮ ಸಾಮರ್ಥ್ಯ ಪ್ರದರ್ಶಿಸಿದ್ದೇವೆ. ಈ ಅವಧಿಯಲ್ಲಿ ನಾವು ನೀಡಿದ ಸೇವೆಯಿಂದಾಗಿ ಮಾರುಕಟ್ಟೆಯಲ್ಲಿ ಕ್ಲಿಪ್ಪರ್​ ಪ್ರಮುಖ ಸ್ಥಾನ ಗಳಿಸಿದೆ ಎಂದಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...