alex Certify ‘ಅಯೋಧ್ಯೆ’ ಯಲ್ಲಿ ಬಿಜೆಪಿ ಸೋಲಿಗೆ ಆಕ್ರೋಶ; ಊರಿನ ಹೆಸರಿಗೆ ಬೆಂಕಿ ಹಚ್ಚಿದ ವಿಡಿಯೋ ವೈರಲ್…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಅಯೋಧ್ಯೆ’ ಯಲ್ಲಿ ಬಿಜೆಪಿ ಸೋಲಿಗೆ ಆಕ್ರೋಶ; ಊರಿನ ಹೆಸರಿಗೆ ಬೆಂಕಿ ಹಚ್ಚಿದ ವಿಡಿಯೋ ವೈರಲ್…!

Man Wearing BJP Scarf Sets Fire to 'Ayodhya' Figurine After Lok Sabha Elections 2024 Results, Police React After Video Goes Viral

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಶ್ರೀರಾಮನ ಜನ್ಮಸ್ಥಾನ ಅಯೋಧ್ಯೆಯಲ್ಲಿ ಬಿಜೆಪಿ ಅಭ್ಯರ್ಥಿಗೆ ಸೋಲುಂಟಾಗಿದೆ. ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಭವ್ಯವಾದ ರಾಮ ಮಂದಿರ ಕಟ್ಟಿಸಿದರೂ ಕೂಡ ಇಲ್ಲಿ ತಮ್ಮ ಪಕ್ಷದ ಅಭ್ಯರ್ಥಿ ಲಲ್ಲೂ ಸಿಂಗ್ ಅವರಿಗೆ ಸೋಲಾಗಿರುವುದು ಬಿಜೆಪಿ ಅಭಿಮಾನಿಗಳಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ಹೀಗಾಗಿ ತಮ್ಮ ಆಕ್ರೋಶವನ್ನು ವಿವಿಧ ರೀತಿಯಲ್ಲಿ ಈಗಾಗಲೇ ವ್ಯಕ್ತಪಡಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಅಯೋಧ್ಯೆ ಜನತೆಗೆ ನಿಂದಿಸಿ ಕೆಲವರು ಪೋಸ್ಟ್ ಹಾಕಿದ್ದರೆ ಮತ್ತೊಬ್ಬ ವ್ಯಕ್ತಿಯಂತೂ ಶ್ರೀರಾಮನನ್ನೇ ನಿಂದಿಸಿದ್ದ. ಇನ್ನು ಕೆಲವರು ತಾವು ಅಯೋಧ್ಯೆಗೆ ತೆರಳಿ ಶ್ರೀರಾಮನ ದರ್ಶನ ಮಾಡಲು ಬಯಸುವುದಿಲ್ಲವೆಂದು ಹೇಳಿದ್ದರೆ, ಮತ್ತೆ ಹಲವರು ಅಯೋಧ್ಯೆಗೆ ಹೋದರೂ ಸಹ ಅಲ್ಲಿನ ವ್ಯಾಪಾರಿಗಳಿಂದ ಏನನ್ನೂ ಖರೀದಿಸಲು ತಾವು ಬಯಸುವುದಿಲ್ಲ ಎಂದು ಹೇಳುವ ಮೂಲಕ ಬಿಜೆಪಿ ಸೋಲಿಸಿದ್ದಕ್ಕೆ ಆಕ್ರೋಶ ಹೊರಹಾಕಿದ್ದರು.

ಇದೀಗ ಬಿಜೆಪಿ ಸ್ಕಾರ್ಫ್ ಧರಿಸಿದ್ದ ವ್ಯಕ್ತಿಯೊಬ್ಬ ಮಾಡಿರುವ ಕೃತ್ಯದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ವಿವಿಧ ಅಭಿಪ್ರಾಯಗಳಿಗೆ ಕಾರಣವಾಗಿದೆ. ಈತ ‘ಅಯೋಧ್ಯಾ’ ಎಂದು ನೆಲದ ಮೇಲೆ ಬರೆದಿರುವ ಊರಿನ ಹೆಸರಿಗೆ ಬೆಂಕಿ ಇಟ್ಟಿದ್ದಾನೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಲೇ ಪ್ರತಿಕ್ರಿಯೆ ವ್ಯಕ್ತಪಡಿಸಿರುವ ಪೊಲೀಸರು, ಆತನ ವಿರುದ್ಧ ಕ್ರಮ ಜರುಗಿಸಲು ಪತ್ತೆ ಕಾರ್ಯದಲ್ಲಿ ತೊಡಗಿದ್ದೇವೆ ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...