ಕ್ರೀಡಾ ಪ್ರೇಮಿಗಳು ತಮ್ಮ ನೆಚ್ಚಿನ ತಂಡ ಅಥವಾ ಆಟವನ್ನು ವೀಕ್ಷಿಸಲು ಯಾವುದೇ ರೀತಿಯ ರಿಸ್ಕ್ ಬೇಕಾದರೂ ತೆಗೆದುಕೊಳ್ಳುತ್ತಾರೆ . ಆನ್‌ಲೈನ್‌ನಲ್ಲಿ ಹಂಚಿಕೊಂಡ ಅಂತಹ ಒಂದು ವಿಡಿಯೋದಲ್ಲಿ ಹಾರ್ಡ್‌ಕೋರ್ ಫುಟ್‌ಬಾಲ್ ಅಭಿಮಾನಿಯೊಬ್ಬರು ಆಸ್ಪತ್ರೆಯಲ್ಲಿ ಆಪರೇಷನ್ ಮಾಡಿಸಿಕೊಳ್ಳುತ್ತಿರುವಾಗ ಫಿಫಾ ವಿಶ್ವಕಪ್ ಪಂದ್ಯವನ್ನು ವೀಕ್ಷಿಸುತ್ತಿದ್ದಾರೆ.
ಈ ಫೋಟೋವನ್ನ ತಕ್ಷಣವೇ ಉದ್ಯಮಿ ಆನಂದ್ ಮಹೀಂದ್ರಾ ಹಂಚಿಕೊಂಡಿದ್ದಾರೆ. ಈ ವ್ಯಕ್ತಿ ಕೆಲವು ರೀತಿಯ ಟ್ರೋಫಿಗೆ ಅರ್ಹನಲ್ಲವೇ ಎಂದು ಆನಂದ್ ಮಹೀಂದ್ರಾ ಪ್ರಶ್ನಿಸಿದ್ದಾರೆ.
ಪೋಲೀಷ್ ನಗರದ ಕೀಲ್ಸ್‌ನಲ್ಲಿರುವ ಆಸ್ಪತ್ರೆಯಲ್ಲಿ ಈ ಚಿತ್ರವನ್ನು ತೆಗೆಯಲಾಗಿದೆ ಮತ್ತು ಕೆಲವು ಸಿಬ್ಬಂದಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ ಎಂದು ವರದಿಯಾಗಿದೆ.
ವರದಿಗಳ ಪ್ರಕಾರ ನವೆಂಬರ್ 25 ರಂದು ವ್ಯಕ್ತಿ ತನ್ನ ದೇಹದ ಕೆಳಭಾಗದಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾದರು. ಆಪರೇಷನ್ ಗೂ ಮೊದಲು ಆತ ಶಸ್ತ್ರಚಿಕಿತ್ಸೆ ಮಾಡುವಾಗ ವೇಲ್ಸ್ ಮತ್ತು ಇರಾನ್ ನಡುವಿನ ಪಂದ್ಯವನ್ನು ವೀಕ್ಷಿಸಬಹುದೇ ಎಂದು ಶಸ್ತ್ರಚಿಕಿತ್ಸಕರನ್ನು ಕೇಳಿದ್ದ. ಆಸ್ಪತ್ರೆಯ ಅಧಿಕಾರಿಗಳು ಅನುಮತಿ ನೀಡಿ ಟೆಲಿವಿಷನ್ ಸೆಟ್ ಅನ್ನು ಆಪರೇಷನ್ ಥಿಯೇಟರ್‌ಗೆ ತರಿಸಿದ್ದರು.