ಆನ್‍ಲೈನ್ ಗೇಮ್ಸ್ ಗಳು, ಮದ್ಯಪಾನ, ಧೂಮಪಾನ ಸೇರಿದಂತೆ ಯಾವುದೇ ಚಟಗಳಾಗಲಿ ಒಂದು ಮಿತಿಯಲ್ಲಿರುವುದು ಉತ್ತಮ. ಅದು ಮಿತಿಮೀರಿದಾಗ ವ್ಯಕ್ತಿಯು ತನ್ನ ವಿವೇಕ ಕಳೆದುಕೊಂಡು ಮೃಗವಾಗುತ್ತಾನೆ ಎಂದು ಹಿರಿಯರು ಎಚ್ಚರಿಸಿದ್ದಾರೆ.
ಹಾಗಿದ್ದೂ, ಮಾರ್ಕ್ ಜೊಹಾನ್ ಎಂಬ ಸಾಕ್ಷ್ಯಚಿತ್ರಗಳ ನಿರ್ಮಾಪಕ ತನ್ನ ಚಟವನ್ನು ದುಶ್ಚಟವಾಗಿಸಿಕೊಂಡು, ಅದಕ್ಕೆ 1 ಕೋಟಿ ರೂ. ಬೆಲೆ ತೆತ್ತಿದ್ದಾನೆ ! ಹೌದು, ಆದರೆ ಆ ಚಟ ‘ನೀಲಿ ಚಿತ್ರಗಳ ವೀಕ್ಷಣೆ’.
ಚಿನ್ನ ಕಳ್ಳಸಾಗಣೆಗೆ ಈತ ಅನುಸರಿಸಿದ ಮಾರ್ಗ ಕಂಡು ದಂಗಾದ ಅಧಿಕಾರಿಗಳು…!
ಕಂಡಕಂಡ ಬ್ಲೂಫಿಲಂ ವೆಬ್‍ಸೈಟ್‍ಗಳಿಗೆ ಭೇಟಿ ನೀಡುವುದು. ಅದರಲ್ಲಿನ ವಿಡಿಯೊಗಳನ್ನು ಗಂಟೆಗಟ್ಟಲೆ ನೋಡುತ್ತಾ ಕೂರುವುದು. ಅಲ್ಲದೆಯೇ ನೇರಪ್ರಸಾರದ ಕಾರ್ಯಕ್ರಮಗಳಿಗೆ ದುಬಾರಿ ಟಿಕೆಟ್ ಖರೀದಿಸಿ, ಕಾಮತೃಷೆ ತಣಿಸಿಕೊಳ್ಳುವ ಚಾಳಿಗೆ ಜಾನ್ ಬಿದ್ದಿದ್ದ. ತನ್ನ ಆದಾಯವೆಲ್ಲವೂ ನೀಲಿಚಿತ್ರಗಳನ್ನು ನೋಡುವುದರಲ್ಲೇ ಖಾಲಿ ಆದಾಗ, ಆತ ತಾನು ಕೆಲಸ ಮಾಡುತ್ತಿದ್ದ ಕಂಪನಿಯ ಕ್ರೆಡಿಟ್ ಕಾರ್ಡ್ ಬಳಸಿಕೊಂಡು, ಭಾರಿ ಹಣ ವೆಚ್ಚ ಮಾಡಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಕಂಪನಿಯು ಕೋರ್ಟ್ ಮೆಟ್ಟಿಲೇರಿದ ಪರಿಣಾಮ, ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ನ್ಯಾಯಾಧೀಶರು 1 ಕೋಟಿ ರೂ. ದಂಡವನ್ನು ವಿಧಿಸಿದ್ದಾರೆ.