ಕೆಲವು ನದಿ, ತೊರೆಗಳ ಬಳಿ ಇಲ್ಲಿ ಮೊಸಳೆಗಳಿವೆ ಎಚ್ಚರ ಎಂಬ ಫಲಕಗಳನ್ನು ಬರೆದಿರುವುದನ್ನು ಬಹುಶಃ ನೀವು ನೋಡಿರಬಹುದು. ಕೆಲವರು ಇಂತಹ ನದಿಯಲ್ಲಿ ಈಜಲು ಹೋಗಿ ಅಪಾಯಕ್ಕೆ ಸಿಲುಕಿದವರಿದ್ದಾರೆ.
ಹೌದು, ಪರಭಕ್ಷಕ ಜೀವಿಯಾಗಿರುವ ಮೊಸಳೆ ಅಂದ್ರೆ ಬಹುತೇಕ ಎಲ್ಲರೂ ಭಯಪಡುತ್ತಾರೆ. ಮೊಸಳೆ ಎಲ್ಲಾದ್ರೂ ಅಪ್ಪಿತಪ್ಪಿ ನಮ್ಮ ಬಳಿ ಬಂದ್ರೆ ಜೀವ ಬಾಯಿಗೆ ಬಂದಂತಹ ಅನುಭವವಾಗುತ್ತದೆ. ಆದರೀಗ ವೈರಲ್ ಆಗಿರೋ ವಿಡಿಯೋ ನೋಡಿದ್ರೆ ನಿಮ್ಮ ಎದೆಬಡಿತ ಜೋರಾಗಿ ಬಡಿದುಕೊಳ್ಳೋದ್ರಲ್ಲಿ ಸಂದೇಹವೇ ಇಲ್ಲ.
ಮೊಸಳೆ ಅಂದ್ರೆ ಭಯಪಡುವವರ ನಡುವೆ ಇಲ್ಲೊಬ್ಬ ವ್ಯಕ್ತಿ ಮೊಸಳೆಯನ್ನು ತನ್ನ ಗೆಳೆಯನನ್ನಾಗಿ ಪರಿವರ್ತಿಸಿದ್ದಾನೆ. ಆತ ಪರಭಕ್ಷಕ ಸರೀಸೃಪದೊಂದಿಗೆ ನೃತ್ಯ ಮಾಡುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ನೆಟ್ಟಿಗರ ಹುಬ್ಬೇರಿಸಿದೆ.
ವ್ಯಕ್ತಿಯೊಬ್ಬ ಮೊಸಳೆಯ ತೋಳುಗಳನ್ನು ಹಿಡಿದುಕೊಂಡು ನೀರಿನೊಳಗೆ ನಡೆಯುತ್ತಿರುವುದು ಕಂಡುಬರುತ್ತದೆ. ಮೊಸಳೆಯು ನೇರವಾಗಿ ನೀರಿನೊಳಗೆ ನಿಂತಿದ್ದರೆ, ಆ ವ್ಯಕ್ತಿ ತನ್ನ ತಲೆಯನ್ನು ಮೊಸಳೆಯ ಬಾಯಿಯ ಕೆಳಗೆ ನಿಧಾನವಾಗಿ ಇಡುವುದನ್ನು ವಿಡಿಯೋದಲ್ಲಿ ಕಾಣಬಹುದು.
ನಂತರ ಆತ ಮೊಸಳೆಯೊಂದಿಗೆ ನೃತ್ಯದಲ್ಲಿ ತೊಡಗಿರುವುದು ವಿಡಿಯೋದಲ್ಲಿ ಕಂಡು ಬಂದಿದೆ. ಭಯಾನಕ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರನ್ನು ಗಾಬರಿ ಬೀಳಿಸಿದೆ.
https://youtu.be/yJ6ggGRUHYY