ಇಂದಿನ ಸ್ಪೀಡ್ ಜಮಾನದಲ್ಲಿ ಟೈಂ ವೇಸ್ಟ್ ಮಾಡೋದು ಯಾರಿಗೂ ಇಷ್ಟವಾಗೋದಿಲ್ಲ. ಕಡಿಮೆ ಸಮಯದಲ್ಲಿ ಹೆಚ್ಚಿನ ಕೆಲಸ ಮುಗೀಬೇಕು ಅನ್ನೋದು ಅನೇಕರ ಅಭಿಪ್ರಾಯವಾಗಿದೆ. ಆದರೆ ಸಂದರ್ಶನದ ಸಮಯದಲ್ಲಿ ನೀವು ಇದನೆಲ್ಲ ನಿರೀಕ್ಷಿಸಲು ಸಾಧ್ಯವಿಲ್ಲ. ಕೆಲಸದ ಅವಶ್ಯಕತೆ ನಿಮಗೆ ಇರೋದ್ರಿಂದ ಕಂಪನಿ ಮಾಲೀಕ ಎಷ್ಟು ಹೊತ್ತು ಕಾಯಿಸಿದರೂ ಕಾಯಲೇಬೇಕಾಗುತ್ತದೆ. ಆದರೆ ಇದಕ್ಕೆ ವಿರುದ್ಧ ಘಟನೆಯೊಂದು ಜರುಗಿದ್ದು ಈ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸಂದರ್ಶನಕ್ಕೆ 15 ನಿಮಿಷ ಹೆಚ್ಚುವರಿಯಾಗಿ ಕಾಯಬೇಕಾದ ಪ್ರಸಂಗ ಬಂದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬ ಸಂದರ್ಶನದಿಂದ ಹೊರ ನಡೆದಿದ್ದಾರೆ.
ನಾನು ಇಂದು 2:30ರ ಸುಮಾರಿಗೆ ಕಂಪನಿಗೆ ಬಂದೆ. ನಾನು ಕಂಪನಿಯ ನಿರ್ದೇಶಕರನ್ನು ಭೇಟಿಯಾಗಲು ಲಾಬಿಯಲ್ಲಿ ಕಾಯುತ್ತಿದ್ದೆ. ಈ ವೇಳೆ ನನ್ನ ಬಳಿ ಬಂದ ಕಂಪನಿಯ ಮತ್ತೊಬ್ಬ ಸಿಬ್ಬಂದಿ ನಿರ್ದೇಶಕರು ನಿಮ್ಮನ್ನು ಭೇಟಿಯಾಗಲು ಇನ್ನೊಂದು ಕೆಲವು ನಿಮಿಷಗಳು ತಡವಾಗಬಹುದು ಎಂದು ಹೇಳಿದ್ದರು. 2:45ಕ್ಕೆ ನಾನು ಸೀದಾ ಕಂಪನಿಯಿಂದ ಹೊರಬಂದೆ. ಈ ಇಂಡಸ್ಟ್ರಿ ಹೇಗೆಂದು ನನಗೆ ಗೊತ್ತಿದೆ. ಇನ್ನೂ ಕೆಲವು ನಿಮಿಷಗಳ ಕಾಲ ಆ ವ್ಯಕ್ತಿಗಾಗಿ ಕಾಯಬೇಕೆಂದು ನನಗೆ ಎನಿಸಲಿಲ್ಲ. ಆದರೆ ನನಗೊಂದು ವಿಚಾರ ತಿಳಿದಿದ್ದು ಏನೆಂದರೆ : ಈ ಕಂಪನಿಯು ವ್ಯಕ್ತಿಯ ತಾಳ್ಮೆಯನ್ನು ಪರೀಕ್ಷೆ ಮಾಡುತ್ತಿದೆ ಎಂದು ರೆಡಿಟ್ನಲ್ಲಿ ಬರೆಯಲಾಗಿದೆ.
ನನ್ನ ಪ್ರಸ್ತುತ ಹುದ್ದೆಯ ಸಂದರ್ಶನವು ಸುಮಾರು 30 ನಿಮಿಷಗಳು ತಡವಾಗಿ ಆರಂಭಗೊಂಡಿದೆ. ಆದರೆ ನಾನು ಅಲ್ಲಿಗೆ ಹೋಗುವ ವೇಳೆಗೆ ಅಲ್ಲಿ ಏನೋ ಸಮಸ್ಯೆ ಇದೆ ಹೀಗಾಗಿ ಸಂದರ್ಶನ ಇನ್ನಷ್ಟು ತಡವಾಗುತ್ತೆ ಅನ್ನೋದು ನನ್ನ ಗಮನಕ್ಕೆ ಬಂತು. ನನ್ನ ಸಂದರ್ಶನ ಯಾವಾಗ ಶುರುವಾಗುತ್ತೋ ಅಂತಾ ನಾನು ಲಾಬಿಯಲ್ಲೇ ಕುಳಿತು ಕಾಯುತ್ತಿದ್ದೆ ಎಂದು ತಮ್ಮ ಅನುಭವ ಹಂಚಿಕೊಂಡಿದ್ದಾರೆ .