ಲಾಸ್ ಏಂಜಲೀಸ್: ಅಮೆರಿಕದಲ್ಲಿ ವಾಸಿಸುತ್ತಿರುವ 72 ವರ್ಷದ ಚೈನೀಸ್ ವ್ಯಕ್ತಿಯೊಬ್ಬರು ಕಳೆದ 40 ವರ್ಷಗಳಲ್ಲಿ ಸುಮಾರು 8,000 ರೆಸ್ಟೋರೆಂಟ್‌ಗಳಿಗೆ ಭೇಟಿ ನೀಡಿದ್ದಾರೆ. ಲಾಸ್ ಏಂಜಲೀಸ್‌ನ ಡೇವಿಡ್ ಆರ್. ಚಾನ್, ಮೂರನೇ ತಲೆಮಾರಿನ ಚೈನೀಸ್ ಅಮೆರಿಕನ್ ಆಗಿದ್ದಾರೆ.
ಚಾನ್ ಅವರು ಗುರುತಿನ ಹುಡುಕಾಟವಾಗಿ ಅಮೆರಿಕಾದಲ್ಲಿ ಅಧಿಕೃತ ಚೈನೀಸ್ ಆಹಾರವನ್ನು ಹುಡುಕಲು ಪ್ರಾರಂಭಿಸಿದ್ದಾರೆ. ಪ್ರತಿ ರೆಸ್ಟೋರೆಂಟ್ ಭೇಟಿಯನ್ನು ವಿವರಿಸುವ ಸ್ಪ್ರೆಡ್‌ಶೀಟ್ ಅನ್ನು ಚಾನ್ ಇಟ್ಟುಕೊಂಡಿದ್ದಾರೆ. ಜೊತೆಗೆ ಸಾವಿರಾರು ರೆಸ್ಟೋರೆಂಟ್ ಗಳ ಮೆನುಗಳನ್ನು ಕೂಡ ಇಟ್ಟುಕೊಂಡಿದ್ದಾರೆ.
1970 ರ ದಶಕದಲ್ಲಿ ಲಾಸ್ ಏಂಜಲೀಸ್ ಪ್ರದೇಶದಲ್ಲಿ ಅಧಿಕೃತ ಚೈನೀಸ್ ರೆಸ್ಟೋರೆಂಟ್ ಗೆ ಕನಿಷ್ಠ ಒಮ್ಮೆಯಾದ್ರೂ ಭೇಟಿ ನೀಡುವುದು ತನ್ನ ಗುರಿಯಾಗಿತ್ತು ಎಂದು ಚಾನ್ ಹೇಳಿದ್ದಾರೆ. ಆದರೆ, ಅವರು ಲಾಸ್ ಏಂಜಲೀಸ್ ಮಾತ್ರವಲ್ಲ, ನ್ಯೂಯಾರ್ಕ್, ಸ್ಯಾನ್ ಫ್ರಾನ್ಸಿಸ್ಕೋ ಮತ್ತು ಮಿಸ್ಸಿಸ್ಸಿಪ್ಪಿ ಸೇರಿದಂತೆ ದೇಶದಾದ್ಯಂತ ಅಧಿಕೃತ ಚೈನೀಸ್ ಆಹಾರವನ್ನು ಹುಡುಕುವುದನ್ನು ಮುಂದುವರೆಸಿದ್ರು.
ವರ್ಷಗಳಲ್ಲಿ, ಅವರ ಪ್ರಯಾಣವು ಚೀನೀ ಆಹಾರದ ಏರಿಕೆ ಮತ್ತು ಯುಎಸ್ ನಲ್ಲಿ ಅದರ ಬದಲಾಗುತ್ತಿರುವ ಡೈನಾಮಿಕ್ಸ್ ಅನ್ನು ವಿವರಿಸುತ್ತದೆ. ಚಾನ್ ತನ್ನನ್ನು ಆಹಾರ ಪ್ರಿಯ ಎಂದು ಕರೆಸಿಕೊಳ್ಳುವುದಿಲ್ಲ.
ಆಶ್ಚರ್ಯಕರ ವಿಷಯವೇನೆಂದರೆ, ಚಾನ್ ಬಾಲ್ಯದಲ್ಲಿ ಚೈನೀಸ್ ಆಹಾರವನ್ನು ಸೇವಿಸುತ್ತಿರಲಿಲ್ಲ. ಅವರು 1950 ರ ದಶಕದಲ್ಲಿ ತಮ್ಮ ಮೊದಲ ಚೈನೀಸ್ ಊಟವನ್ನು ಸೇವಿಸಿದರಂತೆ. ಅಮೆರಿಕಾದಲ್ಲಿ ಮೊದಲಿಗೆ ಚೈನೀಸ್ ಆಹಾರವನ್ನು ಸ್ಥಳೀಯ ಪದಾರ್ಥಗಳನ್ನು ಬಳಸಿ ತಯಾರಿಸಲಾಯಿತು ಮತ್ತು ಅದು ಅಮೆರಿಕೀಕರಣಗೊಂಡ ರುಚಿಯನ್ನು ಹೊಂದಿತ್ತು ಎಂದು ಅವರು ತಿಳಿಸಿದ್ದಾರೆ. 1960ರ ದಶಕದ ಉತ್ತರಾರ್ಧದಲ್ಲಿ, ಏಷ್ಯಾದಿಂದ ವಲಸೆಯ ಮೇಲಿನ ನಿರ್ಬಂಧಿತ ಕೋಟಾಗಳ ಕಾನೂನು ತೆಗೆದುಹಾಕಿದ ನಂತರ ಚೀನಾದ ವಿವಿಧ ಪಾಕಪದ್ಧತಿಗಳು ಅಮೆರಿಕಾಗೆ ಬಂದವು.
ಯುಎಸ್‌ನಲ್ಲಿ ಚೀನಿಯರ ಇತಿಹಾಸದಲ್ಲಿ ತನ್ನ ಆಸಕ್ತಿಯು ಚೀನಿ ಆಹಾರವನ್ನು ತಿನ್ನುವುದು ಮತ್ತು ದೇಶದ ವಿವಿಧ ಭಾಗಗಳಲ್ಲಿ ಚೈನೀಸ್ ಆಗಿ ಇರುವುದು ಹೇಗೆ ಎಂದು ನೋಡಲು ಕಾರಣವಾಯಿತು ಎಂದು ಚಾನ್ ಹೇಳಿದ್ದಾರೆ. ತಮ್ಮ ಇನ್ಸ್ಟಾಗ್ರಾಂನಲ್ಲಿ ತಾವು ಸವಿದ ಚೀನಿ ಆಹಾರಗಳ ಕೆಲವು ಫೋಟೋಗಳನ್ನು ಚಾನ್ ಹಂಚಿಕೊಂಡಿದ್ದಾರೆ.

