ಪ್ರಪಂಚದ ಅನೇಕ ನಗರಗಳಲ್ಲಿ ಪಬ್ ಗಳಿವೆ. ತಮ್ಮ ಸ್ನೇಹಿತರ ಜೊತೆ ಬರುವ ಅನೇಕ ಮಂದಿ ಇಲ್ಲಿ ಕುಡಿದು ತೂರಾಡುತ್ತಾರೆ. ಎಂಜಾಯ್ ಮಾಡುತ್ತಾರೆ. ತಮ್ಮ ಬಿಡುವಿಲ್ಲದ ಕೆಲಸದ ಜಂಜಾಟದ ನಡುವೆ ಕೆಲವರಿಗೆ ಇದು ಮೋಜಿನ ತಾಣವಾಗಿದೆ.
ಸಾಮಾನ್ಯವಾಗಿ ದಿನದಲ್ಲಿ, ಯಾವುದೇ ವ್ಯಕ್ತಿ ಅಥವಾ ಗುಂಪು 7-8 ಪಬ್‌ಗಳಿಗೆ ಹೋಗಿ ಬರಬಹುದು ಆಹಾರ ಅಥವಾ ಮದ್ಯವನ್ನು ಹಿಡಿದಿಟ್ಟುಕೊಳ್ಳುವ ವ್ಯಕ್ತಿಯ ಸಾಮರ್ಥ್ಯವನ್ನು ಇದು ಅವಲಂಬಿಸಿರುತ್ತದೆ.
ಆದರೆ, ಮ್ಯಾಟ್ ಎಲ್ಲಿಸ್ ಎಂಬ ಪಬ್ ಉತ್ಸಾಹಿಯು ಕೇವಲ 9 ಗಂಟೆಗಳಲ್ಲಿ 51 ಪಬ್ ಗಳಿಗೆ ಭೇಟಿ ನೀಡಿ, ಹೊಸ ಗಿನ್ನಿಸ್ ದಾಖಲೆ ನಿರ್ಮಿಸಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಕುತೂಹಲಕಾರಿ ವಿಷಯವೆಂದರೆ, ಇಷ್ಟೊಂದು ಪಬ್ ಗಳಿಗೆ ಭೇಟಿ ಕೊಟ್ಟರೂ ಆತ ಕುಡಿದಿರಲಿಲ್ಲ.
ಮ್ಯಾಟ್ ಅವರು ಪ್ರತಿ ಗಂಟೆಗೆ ಸರಾಸರಿ ಐದು ಪಬ್‌ಗಳಿಗೆ ಭೇಟಿ ನೀಡಿದ್ದರಂತೆ. ಪ್ರತಿ ಪಬ್‌ನಲ್ಲಿ ಬಿಯರ್ ಕುಡಿಯುವ ಬದಲು, ಕಿತ್ತಳೆ ರಸ ಮತ್ತು ಡಯಟ್ ಕೋಕ್ ಅನ್ನು ಆರಿಸಿಕೊಂಡಿದ್ದಾರೆ. ಅವರು ಯಾವುದೇ ಘನ ಆಹಾರವನ್ನು ಕೂಡ ಸೇವಿಸಲಿಲ್ಲ ಎಂದು ಹೇಳಿದ್ದಾರೆ. 8 ಗಂಟೆ 52 ನಿಮಿಷಗಳಲ್ಲಿ 51 ಪಬ್ ಗಳಿಗೆ ಭೇಟಿ ನೀಡಿ, ಹೊಸ ದಾಖಲೆ ಬರೆದಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಆದಾಗ್ಯೂ, ಹೊಸ ವಿಶ್ವ ದಾಖಲೆಯನ್ನು ಪಡೆಯಲು ಅವರು, 50 ಕ್ಕೂ ಹೆಚ್ಚು ಪಬ್‌ಗಳಲ್ಲಿ ಕನಿಷ್ಠ 125 ಮಿಲಿ ಕುಡಿಯಬೇಕು.