ಫುಡ್ ಡೆಲಿವರಿ ಕಂಪನಿ ಜೊಮಾಟೊ ಇತ್ತೀಚೆಗೆ ‘ಇಂಟರ್ ಸಿಟಿ ಲೆಜೆಂಡ್ಸ್’ ಎಂಬ ಸೇವೆಯನ್ನು ಪ್ರಾರಂಭಿಸಿದೆ. ಇದು ಇತರ ನಗರಗಳಲ್ಲಿನ ಪ್ರಸಿದ್ಧ ಔಟ್ಲೆಟ್ಗಳು ಮತ್ತು ರೆಸ್ಟೋರೆಂಟ್ಗಳಿಂದ ವೈಶಿಷ್ಟ್ಯ ತಿಂಡಿ ತಿನಿಸು ಆರ್ಡರ್ ಮಾಡಲು ಬಳಕೆದಾರರಿಗೆ ಅನುವು ಮಾಡಿಕೊಡುತ್ತದೆ.
ಈ ವೈಶಿಷ್ಟ್ಯವನ್ನು ಆರಂಭದಲ್ಲಿ ದಕ್ಷಿಣ ದೆಹಲಿ ಮತ್ತು ಗುರುಗ್ರಾಮ್ನಲ್ಲಿ ಬಿಡುಗಡೆ ಮಾಡಲಾಗಿದೆ. ಇತ್ತೀಚೆಗೆ, ಜೊಮಾಟೊ ಷೇರುದಾರರಾಗಿರುವ ಗುರುಗ್ರಾಮ್ ನಿವಾಸಿಯೊಬ್ಬರು, ಆಪ್ನ ಹೊಸ ಇಂಟರ್ಸಿಟಿ ವೈಶಿಷ್ಟ್ಯದ ಮೂಲಕ ಹೈದರಾಬಾದ್ನಿಂದ ಚಿಕನ್ ಬಿರಿಯಾನಿಯನ್ನು ಆರ್ಡರ್ ಮಾಡಿದ್ದರು.
ವೈರಲ್ ಆಗಿರುವ ಪೋಸ್ಟ್ನಲ್ಲಿ, ಪ್ರತೀಕ್ ಕನ್ವಾಲ್ ಹೈದರಾಬಾದ್ನ ರೆಸ್ಟೋರೆಂಟ್ನಲ್ಲಿ ಚಿಕನ್ ಬಿರಿಯಾನಿಗಾಗಿ ಆರ್ಡರ್ ಮಾಡಿದ್ದೇನೆ ಆದರೆ ಸಲಾನ್ ಮಾತ್ರ ಸ್ವೀಕರಿಸಿದ್ದೇನೆ ಎಂದು ಹೇಳಿಕೊಂಡಿದ್ದಾರೆ.
ಪ್ರತೀಕ್ ತಮ್ಮ ಸಂಕಷ್ಟವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಸಮಸ್ಯೆಯನ್ನು ಶೀಘ್ರವಾಗಿ ಪರಿಶೀಲಿಸುವಂತೆ ಒತ್ತಾಯಿಸಿದರು. ಜೊಮಾಟೋ ಸಿಇಒ ದೀಪಿಂದರ್ ಗೋಯಲ್ ಅವರನ್ನು ಟ್ಯಾಗ್ ಮಾಡಿ ಬಿರಿಯಾನಿ ನೀಡಬೇಕೆಂದು ಕೋರಿದ್ದಾರೆ.
ಅವರು ಸಲಾನ್ ಬಾಕ್ಸ್ನ ಚಿತ್ರವನ್ನು ಟ್ವೀಟ್ ಮಾಡಿದ್ದು, ಅಂತಾರಾಜ್ಯ ಲೆಜೆಂಡ್ ಸೇವೆ ಉತ್ತಮ ಆಲೋಚನೆಯಂತೆ ತೋರುತ್ತಿದೆ ಎನ್ನುವುದರ ಜೊತೆಗೆ ತಮ್ಮ ಊಟದ ಸಮಸ್ಯೆಯನ್ನು ಹೇಳಿಕೊಂಡಿದ್ದಾರೆ.