ಮಿಚಿಗನ್: ಅದೃಷ್ಟ ಎನ್ನುವುದು ಹೇಗೆ ಬರುತ್ತದೆ ಎಂದು ಹೇಳುವುದು ಕಷ್ಟ. ಐದು ಡಾಲರ್ಗೆ (ಸುಮಾರು 400 ರೂ.) ಚೇಂಜ್ ಇಲ್ಲದ ವ್ಯಕ್ತಿಯೊಬ್ಬ ಚೇಂಜ್ ಪಡೆಯುವುದಕ್ಕೋಸ್ಕರ ಖರೀದಿ ಮಾಡಿದ ಲಾಟರಿ ಆತನ ಅದೃಷ್ಟ ಖುಲಾಯಿಸಿದೆ.
ಮ್ಯಾಥ್ಯೂ ಸ್ಪಾಲ್ಡಿಂಗ್ ಎಂದು ಗುರುತಿಸಲಾದ ವ್ಯಕ್ತಿ ಮಿಚಿಗನ್ ಲಾಟರಿ ಖರೀದಿ ಮಾಡಿದ್ದು ರಾತ್ರೋರಾತ್ರಿ ಲಕ್ಷಾಧಿಪತಿಯಾಗಿದ್ದಾನೆ.
ಈತನಿಗೆ $107,590 (ಅಂದಾಜು ರೂ. 87 ಲಕ್ಷ) ಬಹುಮಾನ ಸಿಕ್ಕಿದೆ. ಮೊಬೈಲ್ ಗ್ಯಾಸ್ ಸ್ಟೇಷನ್‌ನಲ್ಲಿ ಕೆಲಸ ಮಾಡುತ್ತಿರುವ ಈತ ಚೇಂಜ್ ಸಿಗದಿದ್ದಾಗ ಲಾಟರಿ ಖರೀದಿ ಮಾಡಿ ಈ ಬಹುಮಾನದ ಮೊತ್ತ ಗೆದ್ದಿದ್ದಾನೆ.
“ನನಗಿದು ಅನಿರೀಕ್ಷಿತ. ಕನಸಿನಲ್ಲಿಯೂ ಲಾಟರಿ ಗೆಲ್ಲುತ್ತೇನೆ ಎಂದು ಅಂದುಕೊಂಡಿರಲಿಲ್ಲ. ನಾನು ಅಂಗಡಿಯಿಂದ ಹೊರನಡೆಯುತ್ತಿರುವಾಗ ಟಿಕೆಟ್ ಅನ್ನು ನೋಡಿದೆ ಮತ್ತು ನಾನು ಜಾಕ್‌ಪಾಟ್ ಗೆದ್ದಿದ್ದೇನೆ ಎಂದು ನೋಡಿದಾಗ, ಇದು ಕನಸು ಎನ್ನಿಸಿತು. ನಾನು ಕೂಗಿ ಸಂಭ್ರಮಿಸಲು ಆರಂಭಿಸಿದೆ. ಕಚೇರಿಯಲ್ಲಿದ್ದವರೆಲ್ಲಾ ಒಮ್ಮೆಲೆ ಗಾಬರಿಯಾದರು” ಎಂದು ಆತ ವಿವರಿಸಿದ್ದಾನೆ.