ನಿವೃತ್ತ ಲೋಹ ಶೋಧಕರೊಬ್ಬರು 6,48,000 ಪೌಂಡ್ (ರೂ. 6.5 ಕೋಟಿ) ಮೌಲ್ಯದ ಅತ್ಯಪರೂಪದ ಚಿನ್ನದ ನಾಣ್ಯವೊಂದನ್ನು ಪತ್ತೆಹಚ್ಚಿದ ನಂತರ ರಾತ್ರೋರಾತ್ರಿ ಅದೃಷ್ಟದ ಖುಲಾಯಿಸಿಕೊಂಡಿದ್ದಾರೆ.
ಚಿನ್ನದ ಶೋಧಕರಾಗಿದ್ದ ಮೈಕೆಲ್ ಲೀ-ಮಲ್ಲೋರಿ ಅವರು ಬ್ರಿಟನ್‌ನ ಡೆವೊನ್‌ನಲ್ಲಿನ ಕೃಷಿಭೂಮಿಯಲ್ಲಿ ದಶಕದ ಪ್ರಯತ್ನದಲ್ಲಿ ಮೊದಲ ಲೋಹವನ್ನು ಪತ್ತೆ ಹಚ್ಚಲು ಹೊರಟಾಗ ನಾಣ್ಯವನ್ನು ಕಂಡುಕೊಂಡರು.
BIG NEWS: ಚಿನ್ನ, ಬೆಳ್ಳಿ ಆಮದು ಸುಂಕ ಇಳಿಕೆ ಬಗ್ಗೆ ಕೇಂದ್ರದಿಂದ ಸಿಹಿ ಸುದ್ದಿ ಸಾಧ್ಯತೆ
ಇತ್ತೀಚಿನವರೆಗೂ ಮೈಕೆಲ್ ತಮ್ಮ ಕೆಲಸದಿಂದ ಸಂಪೂರ್ಣವಾಗಿ ನಿವೃತ್ತರಾಗಿದ್ದರು, ಆದರೆ ತಮ್ಮ ಹವ್ಯಾಸವನ್ನು ಮರಳಿ ಆರಂಭಿಸಲು ಅವರ ಮಕ್ಕಳು ಸೂಚಿಸಿದ್ದಾರೆ. ಆದ್ದರಿಂದ, 52 ವರ್ಷ ವಯಸ್ಸಿನ ಮೈಕೆಲ್ ಸೆಪ್ಟೆಂಬರ್ 2021 ರಲ್ಲಿ ತಮ್ಮ ಹಳೆಯ ಕೆಲಸವನ್ನು ಪುನರಾರಂಭಿಸಿದ್ದು ಮೊದಲ ಚಿನ್ನದ ನಾಣ್ಯವನ್ನು ಕಂಡುಕೊಂಡಾಗ, ಅದು ಎಷ್ಟು ಮೌಲ್ಯದ್ದು ಎಂದು ಅವರಿಗೆ ತಿಳಿದಿರಲಿಲ್ಲ.
ಪತ್ತೆಯಾದ ನಾಣ್ಯದ ಫೋಟೋವನ್ನು ಫೇಸ್‌ಬುಕ್‌ನಲ್ಲಿ ಅಪ್‌ಲೋಡ್ ಮಾಡಿದ ನಂತರ, ಸ್ಪಿಂಕ್ ಹರಾಜುದಾರರ ತಜ್ಞರು ಈ ನಾಣ್ಯವು ಹೆನ್ರಿ III ಪೆನ್ನಿ ಎಂದು ಬಹಿರಂಗಪಡಿಸಿದ್ದು, ಇದು ಇಂಗ್ಲಿಷ್ ರಾಜನ ಮೊದಲ ‘ನಿಜವಾದ’ ಭಾವಚಿತ್ರವಾಗಿದ್ದು, ಅವರು ಸಿಂಹಾಸನದ ಮೇಲೆ ಕೂತಿರುವಂತೆ ತೋರಿಸುತ್ತದೆ ಎಂದು ಹೇಳಲಾಗಿದೆ.
ಈ ನಾಣ್ಯವನ್ನು ಸರಿಸುಮಾರು 1257 ರಲ್ಲಿ ಗ್ಲೌಸೆಸ್ಟರ್‌ನ ವಿಲಿಯಂ ಎಂಬಾತ ಉತ್ತರ ಆಫ್ರಿಕಾದಿಂದ ಆಮದು ಮಾಡಿಕೊಂಡ ಚಿನ್ನದಿಂದ ಮುದ್ರಿಸಿದ್ದರು
ಎಂದು ಮಿರರ್ ವರದಿ ಮಾಡಿದೆ. ಇದು ತುಂಬಾ ಅಪರೂಪದ ಇಂಥ ಎಂಟು ನಾಣ್ಯಗಳು ಮಾತ್ರ ಅಸ್ತಿತ್ವದಲ್ಲಿವೆ ಎಂದು ತಿಳಿದುಬಂದಿದೆ. ಹಿಂದೆ ಸಿಕ್ಕವೆಲ್ಲಾ
ಈಗ ವಸ್ತುಸಂಗ್ರಹಾಲಯಗಳಲ್ಲಿವೆ.
ಮೈಕೆಲ್‌ರ ನಾಣ್ಯವು ಹರಾಜುಗಾರನ ಸುಪರ್ದಿಗೆ ಹೋಗಿದ್ದು, ಅವರ ಜೀವನಕ್ಕೇ ಹೊಸ ದಿಕ್ಕು ಕೊಡಬಲ್ಲ £ 6,48,000 (ರೂ. 6.5 ಕೋಟಿ) ಗಳಿಸಿದೆ. ವರದಿಗಳ ಪ್ರಕಾರ, ಇದು ಹರಾಜಿನಲ್ಲಿ ಮಾರಾಟವಾದ ಅತ್ಯಂತ ಬೆಲೆಬಾಳುವ ಮಧ್ಯಕಾಲೀನ ಇಂಗ್ಲಿಷ್ ನಾಣ್ಯವಾಗಿದೆ.
ಅನಾಮಧೇಯರಾಗಿ ಉಳಿಯಲು ಬಯಸಿರುವ ಖರೀದಿದಾರರು, ಸಂಸ್ಥೆಯೊಂದರ ವಸ್ತುಸಂಗ್ರಹಾಲಯಕ್ಕೆ ನಾಣ್ಯವನ್ನು ಸಾಲವಾಗಿ ನೀಡುವುದಾಗಿ ಹೇಳಿದ್ದಾರೆ. ಮೈಕೆಲ್‌ಗೆ ಫಾರ್ಮ್‌ನ ಮಾಲೀಕರೊಂದಿಗೆ ನಾಣ್ಯದ ಮೌಲ್ಯವನ್ನು 50/50 ಮಾಡಿಕೊಳ್ಳುವುದಾಗಿ ನಿರ್ಧರಿಸಿದ್ದಾರೆ.
52 ವರ್ಷದ ಮೈಕೆಲ್ ತಮ್ಮ 13 ವರ್ಷದ ಮಗಳು ಎಮಿಲಿ ಮತ್ತು 10 ವರ್ಷದ ಮಗ ಹ್ಯಾರಿಯ ಶಿಕ್ಷಣಕ್ಕೆ ಹಣವನ್ನು ಬಳಸಲು ಯೋಜಿಸಿದ್ದಾರೆ