alex Certify ಆತ್ಮಹತ್ಯೆಗೆ ಮುಂದಾದ ವ್ಯಕ್ತಿ ಖಾಸಗಿ ಅಂಗ ಕತ್ತರಿಸಿಕೊಂಡ…..! ಮುಂದೇನಾಯ್ತು ಗೊತ್ತಾ….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆತ್ಮಹತ್ಯೆಗೆ ಮುಂದಾದ ವ್ಯಕ್ತಿ ಖಾಸಗಿ ಅಂಗ ಕತ್ತರಿಸಿಕೊಂಡ…..! ಮುಂದೇನಾಯ್ತು ಗೊತ್ತಾ….?

man tried to suicide and chopped his penis with knife, its reattached in 24  hours at london | Weird: सुसाइड करना चाहता था, चाकू से काट लिया प्राइवेट  पार्ट; फिर जानिए क्या

ಬ್ರಿಟನ್ ನಲ್ಲಿ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯೊಬ್ಬ ಖಾಸಗಿ ಅಂಗವನ್ನು ಚಾಕುವಿನಿಂದ ಕತ್ತರಿಸಿಕೊಂಡಿದ್ದಾನೆ. ಘಟನೆ ಬರ್ಮಿಂಗ್ ಹ್ಯಾಮ್ ನಲ್ಲಿ ನಡೆದಿದೆ.

ಇಲ್ಲಿನ 34 ವರ್ಷದ ವ್ಯಕ್ತಿ, ಖಾಸಗಿ ಅಂಗ ಕತ್ತರಿಸಿಕೊಂಡಿದ್ದಾನೆ. ಆತ ಮಾನಸಿಕ ಅಸ್ವಸ್ಥ ಎನ್ನಲಾಗಿದೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ವ್ಯಕ್ತಿಯನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ. ವ್ಯಕ್ತಿಯ ಆರೋಗ್ಯ ಸುಧಾರಿಸುತ್ತಿದೆ ಎಂದು ವೈದ್ಯರು ಹೇಳಿದ್ದಾರೆ.

ಅಡುಗೆ ಮನೆಯಲ್ಲಿದ್ದ ಚಾಕುವಿನಿಂದ ಈ ವ್ಯಕ್ತಿ, ಖಾಸಗಿ ಅಂಗವನ್ನು ಕತ್ತರಿಸಿದ್ದಾನೆ. ದೇಹದ ಇನ್ನೂ ಕೆಲ ಕಡೆ ಗಾಯವಿದೆ. ವೈದ್ಯರು ಖಾಸಗಿ ಭಾಗವನ್ನು ಸೇರಿಸಿದ್ದಾರೆ. ಯುವಕನ ಶಿಶ್ನ ಮತ್ತೆ ಸೇರಿಕೊಂಡಿರುವುದು ಒಂದು ಪವಾಡಕ್ಕಿಂತ ಕಡಿಮೆಯಿಲ್ಲ ಎಂದು ವೈದ್ಯರು ಹೇಳಿದ್ದಾರೆ.

ಈ ಶಸ್ತ್ರಚಿಕಿತ್ಸೆಯಲ್ಲಿ ಎದುರಾದ ತೊಂದರೆಗಳ ಬಗ್ಗೆ ವೈದ್ಯರು ವಿವರಿಸಿದ್ದಾರೆ. ರೋಗಿ, ಖಾಸಗಿ ಭಾಗವನ್ನು ಬೇರ್ಪಡಿಸಿ ಸುಮಾರು 24 ಗಂಟೆಗಳಾಗಿತ್ತು. ಸುಮಾರು ಎರಡು ವಾರಗಳ ನಂತ್ರ ವ್ಯಕ್ತಿ ಮನೆಗೆ ತೆರಳಿದ್ದಾನೆ. ಖಾಸಗಿ ಭಾಗ ಬೇರ್ಪಟ್ಟು ಹಲವು ಗಂಟೆಗಳ ನಂತರವೂ, ಯಶಸ್ವಿಯಾಗಿ ಸೇರಿರುವುದು ಇದೇ ಮೊದಲ ಪ್ರಕರಣವೆಂದು ವೈದ್ಯರು ಹೇಳಿದ್ದಾರೆ. ವ್ಯಕ್ತಿ ಈಗ ಸಾಮಾನ್ಯ ಜೀವನ ನಡೆಸಬಹುದೆಂದು ವೈದ್ಯರು ಹೇಳಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...