ಲಡಾಖ್‌ನ ಸೌಂದರ್ಯವನ್ನು ಬ್ಲಾಗರ್‌ಗಳು ಇಂಚಿಂಚಾಗಿ ಕಣ್ಣ ಮುಂದೆ ಇಡುತ್ತಿರುವಂತೆ ದೇಶಾದ್ಯಂತ ಅಲ್ಲಿಗೆ ಹೋಗಿ ಬರಬೇಕೆನ್ನುವ ಬಯಕೆ ಜನರಲ್ಲಿ ಹೆಚ್ಚಾಗುತ್ತಿದೆ.
ಉತ್ತರ ಭಾರತದ ಈ ಕೇಂದ್ರಾಡಳಿತ ಪ್ರದೇಶಕ್ಕೆ ಭೇಟಿ ನೀಡಲು ಹೈದರಾಬಾದ್‌ನ ದಿಲೀಪ್ ಕುಮಾರ್ ಎಂಬ ಈತ ಹುಡುಕಿಕೊಂಡ ಹಾದಿ ಮಾತ್ರ ಅದ್ಭುತವಾದದ್ದೇ ಸರಿ. ತಮ್ಮ ಹೋಂಡಾ ಆಕ್ಟಿವಾ ಸ್ಕೂಟರ್‌ನಲ್ಲಿ ಹೈದರಾಬಾದ್‌ನಿಂದ ಹಿಮಾಲಯದ ಪ್ರದೇಶಕ್ಕೆ ಹೊರಟ ದಿಲೀಪ್, 27 ದಿನಗಳ ಸುದೀರ್ಘ ಪ್ರಯಾಣದ ಬಳಿಕ ಲಡಾಖ್ ತಲುಪಿದ್ದಾರೆ.
ʼಐಫೋನ್ʼ ಆರ್ಡರ್ ಮಾಡಿದಾತನಿಗೆ ಬಂತು ಬೆಚ್ಚಿ ಬೀಳಿಸುವ ವಸ್ತು
ಸೆಪ್ಟೆಂಬರ್ 8ರಂದು ತಮ್ಮ ಟ್ರಿಪ್ ಆರಂಭಿಸಿದ 30 ವರ್ಷದ ದಿಲೀಪ್, ಪ್ರತಿನಿತ್ಯ 8-10 ಗಂಟೆಗಳ ಕಾಲ ಸ್ಕೂಟರ್ ಓಡಿಸಿಕೊಂಡು ಹೋಗಿದ್ದಾರೆ. ಭಾರೀ ವಾಹನಗಳು ಓಡಾಡುವ ರಾಷ್ಟ್ರೀಯ ಹೆದ್ದಾರಿಗಳಲ್ಲೇ ದಿಲೀಪ್‌ರ ಬಹುತೇಕ ಪಯಣ ಸಾಗಿದೆ. ನಾಗ್ಪುರ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಪುಟ್ಟದೊಂದು ಅಪಘಾತಕ್ಕೆ ತುತ್ತಾದ ದಿಲೀಪ್‌ಗೆ ಅದರಿಂದ ಹೆಚ್ಚೇನೂ ಗಾಯವಾಗಿರಲಿಲ್ಲವಂತೆ. ಆದರೆ ಅವರ ಸ್ಕೂಟರ್ ಅನೇಕ ರಿಪೇರಿಗಳಿಗೆ ಒಳಗಾಗಬೇಕಾಗಿ ಬಂದಿದೆ.
ಪ್ರಯಾಣವೆಂದರೆ ಬಹಳ ಇಷ್ಟ ಪಡುವ ದಿಲೀಪ್ ಇದಕ್ಕಾಗಿ ಸಮಯ ಹೊಂದಿಸಿಕೊಳ್ಳಲೆಂದೇ ಪೂರ್ಣಾವಧಿ ಕೆಲಸಕ್ಕೆ ಸೇರಿಯೇ ಇಲ್ಲವಂತೆ.
ನಿಮಗೆ ಗೊತ್ತಾ ಕಪ್ಪು ಬೆಳ್ಳುಳ್ಳಿ…..?
ತ್ಸೋ ಮೊರಿರಿ ಕೆರೆಯ ಬಳಿ 60ಕಿಮೀ ಹಾದಿಯನ್ನು ರಸ್ತೆಯಿಂದ ಹೊರಗೆ ಕ್ರಮಿಸಬೇಕಾಗಿ ಬಂದಿದ್ದು, ಈ ವೇಳೆ ತಮ್ಮ ಗಾಡಿಯಲ್ಲಿ ಗರಿಷ್ಠ 10 ಕಿಮೀನಷ್ಟು ವೇಗದಲ್ಲಿ ಮಾತ್ರವೇ ಸಂಚರಿಸಬೇಕಾಗಿ ಬಂದಿತ್ತಂತೆ. ಹಿಮಾಲಯದ ಪ್ರದೇಶದಲ್ಲಿ ಪ್ರತಿನಿತ್ಯ 200-250ಕಿಮೀ ಕ್ರಮಿಸುತ್ತಿದ್ದರಂತೆ.
ರಾತ್ರಿಗಳಲ್ಲಿ ಟೋಲ್ ಪ್ಲಾಜ಼ಾ, ಹಳ್ಳಿಗಳು ಅಥವಾ ಪೆಟ್ರೋಲ್ ಪಂಪ್‌ಗಳ ಬಳಿ ಮಲಗುತ್ತಿದ್ದ ದಿಲೀಪ್, ಯಾವತ್ತೂ ನಿರ್ಜನ ಪ್ರದೇಶಗಳಲ್ಲಿ ಮಲಗುತ್ತಿರಲಿಲ್ಲವಂತೆ. ತಮ್ಮ ಪ್ರಯಾಣದುದ್ದಕ್ಕೂ ಸಂಚಾರಿಗಳ ಸಮೂಹದೊಂದಿಗೆ ಬೆರೆಯುತ್ತಿದ್ದರಂತೆ ದಿಲೀಪ್.
ದೇಶದ ಈಶಾನ್ಯ ಪ್ರದೇಶದತ್ತ ಕುಮಾರ್ ತಮ್ಮ ಮುಂದಿನ ಪಯಣವನ್ನು ಪ್ಲಾನ್ ಮಾಡಿದ್ದಾರಂತೆ.