ಇತ್ತೀಚೆಗೆ ರೈಲ್ವೆ ಇಲಾಖೆ ಸಿಬ್ಬಂದಿಯ ಸಾಹಸ, ಸಹಾಯ, ಸಹಕಾರ ಜನ ಮೆಚ್ಚುಗೆಗೆ ಪಾತ್ರವಾಗುತ್ತಿದೆ. ರೈಲ್ವೆ ಇಲಾಖೆ ಜನ ಸ್ನೇಹಿಯಾಗುವ ನಿಟ್ಟಿನಲ್ಲಿ ಸ್ಪಂದಿಸುವ ರೀತಿ ಪ್ರಯಾಣಿಕರಿಗೆ ಹೊಸ ಅನುಭವ ನೀಡುತ್ತಿದೆ. ಅನೇಕ ಸಂದರ್ಭದಲ್ಲಿ ರೈಲಿನೊಳಗೆ ಆಗುವ ಸಮಸ್ಯೆಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಾಗ ರೈಲ್ವೆ ಅಧಿಕಾರಿಗಳು ತಕ್ಷಣ ಸ್ಪಂದಿಸಿ ಸಮಸ್ಯೆ ಬಗೆಹರಿಸಿದ್ದಿದೆ.
ಇದೀಗ ಮಗುವೊಂದಕ್ಕೆ ಟಿಕೆಟ್ ಪರೀಕ್ಷಕ ನೆರವಾದ ಪ್ರಸಂಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಶಾಖ್ ಕೃಷ್ಣ ತನ್ನ ಒಂದು ವರ್ಷದ ಮಗುವಿನೊಂದಿಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು.
ಆದರೆ ಸಾಕಷ್ಟು ಬೆಳಕಿನ ಸಮಸ್ಯೆ ಎದುರಿಸುತ್ತಿದ್ದ ಆಸನ ಸಿಕ್ಕಿತ್ತು. ಈ ವೇಳೆ ಎದುರಾದ ಟಿಟಿ ಮಗುವಿನ ಅಗತ್ಯತೆಯನ್ನು ಪೂರೈಸಲು ನೆರವಾದರಲ್ಲದೇ, ಸೂಕ್ತ ಪರ್ಯಾಯ ವ್ಯವಸ್ಥೆ ಮಾಡಿ ಮಗುವಿಗೆ ಆರಾಮದಾಯಕ ಪ್ರಯಾಣವನ್ನು ಖಚಿತಪಡಿಸಿಕೊಂಡರು.
ಈ ಪ್ರಸಂಗವನ್ನು ವಿಶಾಕ್ ಕೃಷ್ಣ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಫೋಟೋ ಸಹಿತವಾಗಿ ಘಟನೆಯನ್ನು ವಿವರಿಸಿದ್ದು, ರೈಲ್ವೆ ಇಲಾಖೆಗೆ ಟ್ಯಾಗ್ ಮಾಡಿ ಕೃತಜ್ಞತೆಯನ್ನೂ ಸಲ್ಲಿಸಿದ್ದಾರೆ. ರೈಲ್ವೇ ಸಚಿವಾಲಯದ ಅಧಿಕೃತ ಟ್ವಿಟರ್ ಪ್ರೊಫೈಲ್ ಕೃಷ್ಣ ಅವರ ಉತ್ತರಕ್ಕೆ ಮರು ಪ್ರತಿಕ್ರಿಯೆ ಬಂದಿದ್ದು, ಇದನ್ನು ಗಮನಿಸಿದ ನೆಟ್ಟಿಗರು ರೈಲ್ವೆ ಟಿಟಿಯನ್ನು ಶ್ಲಾಘಿಸಿದ್ದಾರೆ.