ಪತ್ನಿ, ಪರ ಪುರಷನ ಜೊತೆ ಮಾತನಾಡಿದ್ರೆ ಕೋಪಗೊಳ್ಳುವ ಜನರಿದ್ದಾರೆ. ಇನ್ನು ಪತ್ನಿ, ಪರ ಪುರುಷನ ಜೊತೆ ಸಂಬಂಧ ಬೆಳೆಸುವ ಜೊತೆಗೆ ಅದ್ರ ವಿಡಿಯೋವನ್ನು ಪತಿಗೆ ಕಳುಹಿಸಿದ್ರೆ, ಪತಿ ಪರಿಸ್ಥಿತಿ ಏನಾಗಬೇಡ ?
ಅಮೆರಿಕಾದಲ್ಲಿ ಕೋಪಗೊಂಡ ಪತಿಯೊಬ್ಬ, ಪತ್ನಿಗೆ ಮನಸ್ಸಿಗೆ ಬಂದಂತೆ ಥಳಿಸಿದ್ದಾನೆ. 34 ವರ್ಷದ ವಿಲಿಯಂ ಅಟ್ಕಿನ್ಸನ್ ಗೆ ಪತ್ನಿ ಫೋನ್ ನಿಂದ ಹಲವಾರು ವಿಡಿಯೋ ಕರೆ ಬಂದಿದೆ. ವಿಡಿಯೋ ಕರೆಯಲ್ಲಿ, ಪತ್ನಿ, ಪ್ರೇಮಿ ಜೊತೆ ಅಶ್ಲೀಲವಾಗಿ ಕಾಣಿಸಿಕೊಂಡಿದ್ದಾಳೆ.
ಹೊಟೇಲ್ ಪಾರ್ಕಿಂಗ್ ನಲ್ಲಿ ಪತ್ನಿ ಪ್ರೇಮಿ ಜೊತೆ ಇದ್ದಳು ಎನ್ನಲಾಗಿದೆ. ಕಾರಿನಲ್ಲಿ, ಪ್ರೇಮಿ ಜೊತೆ ಸಂಬಂಧ ಬೆಳೆಸುತ್ತಿದ್ದಳಂತೆ. ಅಲ್ಲಿಗೆ ಹೋದ ಪತಿ, ಕಾರಿನಿಂದ ಪತ್ನಿಯನ್ನು ಎಳೆದು, ಮನಸ್ಸಿಗೆ ಬಂದಂತೆ ಥಳಿಸಿದ್ದಾನೆ. ಮಹಿಳೆ ನಶೆಯಲ್ಲಿದ್ದಳು ಎನ್ನಲಾಗಿದೆ. ಪತ್ನಿಯ ಮೂಗು, ಬಾಯಿ ಸೇರಿದಂತೆ ಅನೇಕ ಕಡೆ ಗಾಯವಾಗಿದೆ. ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ.
ವಿಚಾರಣೆ ವೇಳೆ ಪತಿ ತಪ್ಪೊಪ್ಪಿಕೊಂಡಿದ್ದಾನೆ. ಪತ್ನಿಗೆ ಅನೇಕ ಬಾರಿ ಹೊಡೆದಿರುವುದಾಗಿ ಹೇಳಿದ್ದಾನೆ. ಪರ ಪುರುಷನ ಜೊತೆ ಸಂಬಂಧ ಬೆಳೆಸಿದ್ರೆ ಯಾವ ಪತಿ ಸುಮ್ಮನಿರ್ತಾನೆ ಎಂದು ಆತ ಪ್ರಶ್ನೆ ಮಾಡಿದ್ದಾನೆ.