ವೈರಲ್ ಹಾಗ್ ಎಂಬ ಇನ್ಸ್ಟಾಗ್ರಾಂ ಪುಟವು ಹಂಚಿಕೊಂಡ ವಿಡಿಯೋ ಜನರನ್ನು ಜೋರಾಗಿ ನಗುವಂತೆ ಮಾಡಿದೆ. ಅದು ಏನೆಂಬುದು ತಿಳಿಯುವ ಕುತೂಹಲ ನಿಮ್ಮಲ್ಲಿದೆಯೇ ಹಾಗಿದ್ದರೆ ಮುಂದೆ ಓದಿ..
ಹಸುಗಳು ಹಿಂಡಾಗಿ ತಮ್ಮಷ್ಟಕ್ಕೆ ಮೇಯುತ್ತಿದ್ರೆ ವ್ಯಕ್ತಿಯೊಬ್ಬ ಚುಡಾಯಿಸಲು ಮುಂದಾಗಿದ್ದಾನೆ. ಇದರಿಂದ ಕೋಪಗೊಂಡ ಗುಂಪಲ್ಲಿದ್ದ ಕೆಲವು ಹಸುಗಳು ಆತನ ಕಡೆಗೆ ಓಡಿ ಬಂದಿದೆ. ಇದರಿಂದ ಬೆದರಿದ ಆ ವ್ಯಕ್ತಿ ವೇಗವಾಗಿ ಓಡಲು ಪ್ರಯತ್ನಿಸಿದ್ದಾನೆ. ಆತನನ್ನು ಬೆಂಬತ್ತಿದ್ದ ಕೆಲವು ಹಸುಗಳನ್ನು ಕಂಡು ಆತ ಬೆದರಿದ್ದ.
ಅಂದಹಾಗೆ, ನೆಟ್ಟಿಗರನ್ನು ನಗಿಸುವಂತೆ ಮಾಡಿದ್ದು, ವಿಡಿಯೋದಲ್ಲಿನ ಕೊನೆಯ ದೃಶ್ಯ. ಹಸುಗಳು ತನ್ನನ್ನು ಬೆನ್ನತ್ತಿರುವುದರಿಂದ ಹೆದರಿದ ಆ ವ್ಯಕ್ತಿಗೆ ಓಡಲು ಸಾಧ್ಯವಾಗದಿದ್ದರೂ ತನ್ನಿಂದಾದಷ್ಟು ಓಡಲು ಪ್ರಯಾಸಪಟ್ಟಿದ್ದಾನೆ. ಕೊನೆಗೆ ಕೊಳವೊಂದಕ್ಕೆ ಜಾರಿ ಬಿದ್ದಿದ್ದಾನೆ. ಆತನ ಜೊತೆಯಲ್ಲಿದ್ದ ನಾಯಿಮರಿ ಕೂಡ ಹೆದರಿಕೊಂಡು ಆತನ ಹಿಂದೆ ಓಡುತ್ತಾ ಬಂದಿದೆ.
ಈ ದೃಶ್ಯವನ್ನು ರೆಕಾರ್ಡ್ ಮಾಡುತ್ತಿದ್ದ ಆತನ ಕುಟುಂಬಸ್ಥರು ನಗೆಗಡಲಲ್ಲಿ ತೇಲಿದ್ದಾರೆ. ಆದರೆ ಆತನ ಮಗಳು ಮಾತ್ರ ಇದರಿಂದ ತುಂಬಾ ಹೆದರಿದ್ದು, ಕೂಗಿದ್ದಾಳೆ. ಸದ್ಯ, ಈ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರಿಗೆ ನಗು ತಡೆಯಲಾಗಿಲ್ಲ. ಆತ ಓಟಕ್ಕಿತ್ತ ರೀತಿ ಇಷ್ಟವಾಯಿತು ಅಂತಾ ಕಿಚಾಯಿಸಿದ್ದಾರೆ.