ಇರಾನ್ ರಾಜಧಾನಿ ಟೆಹ್ರಾನ್ ನಲ್ಲಿ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಸಂಗಾತಿ ಜೊತೆ ಶಾರೀರಿಕ ಸಂಬಂಧ ಬೆಳೆಸುವ ವೇಳೆ ಖಾಸಗಿ ಅಂಗಕ್ಕೆ ಗಂಭೀರ ಗಾಯವಾಗಿದೆ. ತುಂಬಾ ನೋವನುಭವಿಸಿದ ವ್ಯಕ್ತಿ ನಂತ್ರ ಆಸ್ಪತ್ರೆಗೆ ಹೋಗಿದ್ದಾನೆ.
ಮಾಹಿತಿ ಪ್ರಕಾರ, ಆಸ್ಪತ್ರೆಗೆ ಬಂದ ವ್ಯಕ್ತಿ ಖಾಸಗಿ ಅಂಗದಿಂದ ರಕ್ತ ಬರ್ತಿತ್ತಂತೆ. ವೈದ್ಯರು ಎಂಆರ್ಐ ಸ್ಕ್ಯಾನ್ ಮಾಡಿದ್ದಾರೆ. ಆಗ, ವ್ಯಕ್ತಿಯ ಖಾಸಗಿ ಅಂಗ ಮುರಿದಿರುವುದು ಗೊತ್ತಾಗಿದೆ. ಅಸ್ಥಿರಜ್ಜು ಮುರಿದಿದ್ದು, ಶಸ್ತ್ರಚಿಕಿತ್ಸೆ ಮಾಡದಿರಲು ವೈದ್ಯರು ನಿರ್ಧರಿಸಿದ್ದರು. ಕೆಲ ಮಾತ್ರೆ ಸೇವನೆಯಿಂದ ಇದು ಸರಿಯಾಗಲಿದೆ ಎಂಬ ವಿಶ್ವಾಸದಲ್ಲಿದ್ದರು ವೈದ್ಯರು.
ಆರು ವಾರಗಳವರೆಗೆ ಶಾರೀರಿಕ ಸಂಬಂಧ ಬೆಳೆಸದಂತೆ ವೈದ್ಯರು, ವ್ಯಕ್ತಿಗೆ ಸಲಹೆ ನೀಡಿದ್ದರು. ಒಂದು ವರ್ಷವಾದ್ರೂ ವ್ಯಕ್ತಿಗೆ ನೋವು ಹೋಗಿರಲಿಲ್ಲ. ಹಾಗಾಗಿ ವ್ಯಕ್ತಿ ಮತ್ತೆ ವೈದ್ಯರ ಬಳಿ ಬಂದಿದ್ದ. ಇನ್ನೊಮ್ಮೆ ಎಂಆರ್ಐ ಸ್ಕ್ಯಾನ್ ಮಾಡಲಾಗಿದೆ. ಆಗ ಅಸ್ಥಿರಜ್ಜು ಸರಿಯಾಗಿಲ್ಲ ಎಂಬ ವಿಷ್ಯ ಗೊತ್ತಾಗಿದೆ. ಇದ್ರ ನಂತ್ರ ವೈದ್ಯರು ಶಸ್ತ್ರಚಿಕಿತ್ಸೆ ಮಾಡಲು ಮುಂದಾಗಿದ್ದಾರೆ. ಶಸ್ತ್ರಚಿಕಿತ್ಸೆ ನಂತ್ರ ನೋವು ಕಡಿಮೆಯಾಗಿದೆ. ಆದ್ರೆ ಶಾರೀರಿಕ ಸಂಬಂಧ ಬೆಳೆಸಲು ಸಾಧ್ಯವೇ ಎಂಬುದು ಇನ್ನೂ ಗೊತ್ತಾಗಿಲ್ಲ.