ಕಾರುಗಳನ್ನು ಪಾರ್ಕ್ ಮಾಡಬಾರದ ಜಾಗಗಳಲ್ಲಿ ಒಂದು ಕಡಲ ತೀರ. ಸಮುದ್ರಕ್ಕೆ ತೀರಾ ಹತ್ತಿರದಲ್ಲಿ ನಿಲ್ಲಿಸಿದರೆ ಕಾರಿಗೆ ಏನೆಲ್ಲಾ ಆಗಬಹುದು ಎಂದು ಬಿಚ್ಚಿ ಹೇಳಬೇಕಿಲ್ಲ.
ಬ್ರಿಟನ್ನ ಸೊಮರ್ಸೆಟ್ನ ತಂದೆಯೊಬ್ಬರು ಈ ಪಾಠವನ್ನು ಬಹಳ ಎಡವಟ್ಟಾದ ಹಾದಿಯಲ್ಲಿ ಕಲಿತಿದ್ದಾರೆ. ತನ್ನ ಮಕ್ಕಳಿಗೆ ಬೀಚ್ನ ಕ್ಲೋಸ್ ವ್ಯೂ ತೋರಲೆಂದು ಕಾರನ್ನು ತೀರಾ ನೀರಿನ ಸನಿಹ ಕೊಂಡೊಯ್ದ ಮಾಲೀಕ ಮಾಡಿಕೊಂಡ ಫಜೀತಿಯನ್ನು ಛಾಯಾಗ್ರಾಹಕ ಟಿಮ್ ಕರ್ಟಿಸ್ ಸೆರೆ ಹಿಡಿದಿದ್ದಾರೆ.
ನೋಡು ನೋಡುತ್ತಲೇ ನೀರಿನಲ್ಲಿ ಮುಳುಗಲು ಆರಂಭಿಸಿದ ಕಾರನ್ನು ಅಲೆಗಳು ಜೋರಾಗಿದ್ದ ಕಾರಣ ಕೋಸ್ಟ್ ಗಾರ್ಡ್ ಸಿಬ್ಬಂದಿಗೂ ಮೇಲೆತ್ತಲು ಸಾಧ್ಯವಾಗಿಲ್ಲ.