
ರಷ್ಯಾ ರಾಜಧಾನಿ ಮಾಸ್ಕೋದಲ್ಲಿ ಉಂಟಾದ ಭಾರೀ ಮಳೆಯಿಂದಾಗಿ ತುರ್ತು ಪರಿಸ್ಥಿತಿ ಘೋಷಣೆಯಾಗಿದೆ. ಪರಿಸ್ಥಿತಿ ಬಿಗಡಾಯಿಸುತ್ತಿರೋದ್ರಿಂದ ಜನರಿಗೆ ಮನೆಯ ಒಳಗೇ ಇರುವಂತೆ ಸೂಚನೆ ನೀಡಲಾಗಿದೆ.
ಆದರೆ ಟ್ವಿಟರ್ನಲ್ಲಿ ಶೇರ್ ಮಾಡಲಾದ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಪ್ರವಾಹದ ನಡುವೆಯೇ ಈಜಿಕೊಂಡು ಹೋಗಿದ್ದಾನೆ. ಕೆಲ ಸೆಕೆಂಡ್ಗಳ ಕಾಲ ಮೊಣಕಾಲಿನವರೆಗೆ ಇದ್ದ ನೀರಿನಲ್ಲಿ ನಡೆದುಕೊಂಡೇ ಹೋದ ವ್ಯಕ್ತಿ ಬಳಿಕ ಈಜಲು ಆರಂಭಿಸಿದ್ದಾನೆ.
ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು 66 ಸಾವಿರಕ್ಕೂ ಅಧಿಕ ವೀವ್ಸ್ ಸಂಪಾದಿಸಿದೆ.